ಅದ್ಧೂರಿಯಾಗಿ ಮಗಳ ಮದುವೆ ಮಾಡಿದ ಅಂಬಾನಿ ವಿರುದ್ಧ ಜಮ್ಮು-ಕಾಶ್ಮೀರ ರಾಜ್ಯಪಾಲರ ಟೀಕೆ!

ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ ಉದ್ಯಮಿ ಅಂಬಾನಿ ಕುರಿತು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್ ಟೀಕೆ ಮಾಡಿದ್ದಾರೆ.
ಸತ್ಯಪಾಲ್ ಮಲೀಕ್
ಸತ್ಯಪಾಲ್ ಮಲೀಕ್
ಜಮ್ಮು: ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ ಉದ್ಯಮಿ ಅಂಬಾನಿ ಕುರಿತು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್ ಟೀಕೆ ಮಾಡಿದ್ದಾರೆ.
"ದೇಶದ ಓರ್ವ ಶ್ರೀಮಂತ ವ್ಯಕ್ತಿ 700 ಕೋಟಿ ರೂಪಾಯಿ ಖರ್ಚು ಮಾಡಿ ತಮ್ಮ ಮಗಳ ಮದುವೆ ಮಾಡಿದ್ದಾರೆ. ಆದರೆ ಸಮಾಜಕ್ಕೆ ಯಾವುದೇ ರೀತಿಯ ಆರ್ಥಿಕ ನೆರವನ್ನೂ ನೀಡಿಲ್ಲ" ಎಂದು ಹೇಳಿದ್ದಾರೆ. ಜಮ್ಮುವಿನಲ್ಲಿ ನಡೆದ ಧ್ವಜ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಸತ್ಯಪಾಲ್ ಮಲೀಕ್, ಅಂಬಾನಿ ಹೆಸರು ಹೇಳದೇ ಅಂಬಾನಿ ವಿರುದ್ಧ ಟೀಕೆ ಮಾಡಿದ್ದಾರೆ. 
ವಿವಾಹಕ್ಕೆ 700 ಕೋಟಿ ರೂಪಾಯಿ ವೆಚ್ಚ ಮಾಡುವ ಬದಲು ಅದೇ ಮೊತ್ತವನ್ನು ಜಮ್ಮು-ಕಾಶ್ಮೀರದಲ್ಲಿ 700 ಶಾಲೆಗಳನ್ನು ತೆರೆಯುವುದಕ್ಕೆ ವಿನಿಯೋಗಿಸಬಹುದಿತ್ತು. ಅಥವಾ ಸೇನಾ ಹುತಾತ್ಮರ ಪತ್ನಿಯರಿಗೆ ನೀಡುವುದಕ್ಕೆ ಬಳಕೆ ಮಾಡಬಹುದಾಗಿತ್ತು ಎಂದುಸತ್ಯಪಾಲ್ ಮಲೀಕ್ ಹೇಳಿದ್ದಾರೆ. 
ಇದೇ ವೇಳೆ ಜಮ್ಮು-ಕಾಶ್ಮೀರದ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧವೂ ಸತ್ಯಪಾಲ್ ಮಲೀಕ್ ಟೀಕೆ ಮಾಡಿದ್ದು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ದಿನದಿಂದ ದಿನಕ್ಕೆ ಶ್ರೀಮಂತರಾಗುತ್ತಿದ್ದಾರೆ. ಆದರೆ ಸಮಾಜಕ್ಕೆ ಯಾವುದೇ ರೀತಿಯ ಆರ್ಥಿಕ ನೆರವನ್ನೂ ನೀಡುತ್ತಿಲ್ಲ. ಸಮಾಜದೆಡೆಗೆ ಅವರ್ಯಾರೂ ಸಂವೇದನೆಯಿಂದ ನಡೆದುಕೊಳ್ಳುತ್ತಿಲ್ಲ ಎಂದು ಸತ್ಯಪಾಲ್ ಮಲೀಕ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com