ರಾಫೆಲ್ ಡೀಲ್ ಬಗ್ಗೆ ಧನೋವಾ ಸುಳ್ಳು ಹೇಳುತ್ತಿದ್ದಾರೆ: ವಾಯುಪಡೆ ಮುಖ್ಯಸ್ಥರ ವಿರುದ್ಧ ಮೊಯ್ಲಿ ವಾಗ್ದಾಳಿ

ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಮರ್ಥಿಸಿಕೊಂಡ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಅವರ....
ಬಿ.ಎಸ್.ಧನೋವಾ
ಬಿ.ಎಸ್.ಧನೋವಾ
ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಮರ್ಥಿಸಿಕೊಂಡ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಅವರು, ಧನೋವಾ ಸತ್ಯ ಮರೆಮಾಚಿ, ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಜೊತೆ ಒಪ್ಪಂದ ಮಾಡಿಕೊಳ್ಳುವ ಮುನ್ನ ಧನೋವಾ ಅವರು ಬೆಂಗಳೂರಿನ ಎಚ್ಎಎಲ್ ಗೆ ಭೇಟಿ ನೀಡಿದ್ದರು. ಅಲ್ಲದೆ ಎಚ್ಎಎಲ್ ಗೆ ಆಫ್ಸೆಟ್ ಒಪ್ಪಂದ ಮಾಡಿಕೊಳ್ಳಲು ಯೋಗ್ಯವಾಗಿದೆ ಎಂದು ಹೇಳಿದ್ದರು. ಆದರೆ ವಾಯುಪಡೆ ಮುಖ್ಯಸ್ಥರು ಈಗ ಉಲ್ಟಾ ಹೊಡೆದಿದ್ದಾರೆ ಎಂದು ಮೊಯ್ಲಿ ದೂರಿದ್ದಾರೆ.
ವಾಯುಪಡೆ ಮುಖ್ಯಸ್ಥರು ಈಗ ಸತ್ಯವನ್ನು ಮರೆಮಾಚಿ, ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅವರು ರಾಫೆಲ್ ಡೀಲ್ ನ ಮಾಹಿತಿಯನ್ನು ಸಂಪೂರ್ಣವಾಗಿ ನೀಡುತ್ತಿಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಉತ್ತಮ ತೀರ್ಪು ನೀಡಿದ್ದು, ನಾನು ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ಪ್ರಸ್ತುತ ವಾಯುಪಡೆಗೆ ರಫೇಲ್ ಯುದ್ಧ ವಿಮಾನದ ಅಗತ್ಯ ಹೆಚ್ಚಿದೆ. ರಫೇಲ್ ಯುದ್ಧ ವಿಮಾನ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಸ್ವರವಿಲ್ಲ ಎಂದು ಧನೋವಾ ಅವರು ಹೇಳಿದ್ದರು.
ಎಚ್‌ಎಎಲ್‌ ಮತ್ತು ಡಸಾಲ್ಟ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಎರಡೂ ಕಡೆ ಹೋಗಿ ಪರಿಶೀಲನೆ ನಡೆಸಿದಾಗ, ಡಸಾಲ್ಟ್‌ ಕಡೆಗೆ ಹೆಚ್ಚು ತೂಕ ಬಂದಿತು. ಹೀಗಾಗಿ ಆ ಕಂಪನಿಗೆ ಒಪ್ಪಂದ ನೀಡಲಾಯಿತು ಎಂದು ಧನೋವಾ ವರದಿಗಾರರಿಗೆ ತಿಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com