ವಾಣಿಜ್ಯೋದ್ದೇಶಿತ ಬಾಡಿಗೆ ತಾಯ್ತನಕ್ಕೆ ನಿಷೇಧ: ಸರೋಗಸಿ ನಿಯಂತ್ರಣ ಮಸೂದೆಗೆ ಲೋಕಸಭೆ ಅಸ್ತು

ವಾಣಿಜ್ಯೋದ್ದೇಶಿತ ಬಾಡಿಗೆ ತಾಯ್ತನ ನಿಷೇಧ ಹಾಗೂ ಹತ್ತಿರದ ಸಂಬಂಧಿಗಳು ಮಾತ್ರ ಬಾಡಿಗೆ ತಾಯಿಯಾಗಬಹುದಾದ "ಪರಹಿತಚಿಂತನೆಯ" ಕಾರಣಗಳಿಗಾಗಿ ಮಾತ್ರ ಅನುಮತಿಸುವ....
ದಂಗ್ರಹ ಚಿತ್ರ
ದಂಗ್ರಹ ಚಿತ್ರ
Updated on
ನವದೆಹಲಿ: ವಾಣಿಜ್ಯೋದ್ದೇಶಿತ ಬಾಡಿಗೆ ತಾಯ್ತನ ನಿಷೇಧ ಹಾಗೂ ಹತ್ತಿರದ ಸಂಬಂಧಿಗಳು ಮಾತ್ರ  ಬಾಡಿಗೆ ತಾಯಿಯಾಗಬಹುದಾದ "ಪರಹಿತಚಿಂತನೆಯ" ಕಾರಣಗಳಿಗಾಗಿ ಮಾತ್ರ ಅನುಮತಿಸುವ ಮಸೂದೆಯು ಲೋಕಸಭೆಯಲ್ಲಿ ಬುಧವಾರ ಅಂಗೀಕಾರಗೊಂಡಿದೆ. ಕೇಂದ್ರ ಆರೋಗ್ಯ ಸಚಿವ  ಜೆ.ಪಿ.ನಡ್ಡಾ "ಇದೊಂದು ಐತಿಹಾಸಿಕ ಮಸೂದೆ" ಎಂದು ಬಣ್ಣಿಸಿದ್ದಾರೆ.
ಸರೋಗಸಿ(ನಿಯಂತ್ರಣ) ಮಸೂದೆ, 2016ರ ವಾಣಿಜ್ಯೋದ್ದೇಶಿತ ಬಾಡಿಗೆ ತಾಯ್ತನ ಹಾಗೂ ಮಕ್ಕಳಿಗಾಗಿ ಹಂಬಲಿಸುವ ದಂಪತಿಗಳು ಮದ್ಯವರ್ತಿಗಳಿಂದ ಎದುರಿಸುವ ಕಷ್ಟಗಲನ್ನು ಕೊನೆಗಾಣಿಸಲು ಬಯಸಿದೆ. ಇದರ ಪ್ರಕಾರ ಬಾಡಿಗೆ ತಾಯಿಯಾಗುವವರು ದಂಪತಿಗಳ ಹತ್ತಿರದ ಸಂಬಂಧಿಯಾಗಿರಬೇಕು, ಉದಾಘರಣೆಗೆ ತಂಗಿ, ನಾದಿನಿ, ಆಗಿರಬೇಕು, ಅಲ್ಲದೆ ಆಕೆ ವಿವಾಹಿತಳಾಗಿದ್ದು ಇದಾಗಲೇ ಒಂದು ಆರೋಗ್ಯವಂತ ಶಿಶುವಿನ ತಾಯಿಯಾಗಿದ್ದರಷ್ಟೇ ಆಕೆಗೆ ಬಾಡಿಗೆ ತಾಯಿಯಾಗಲು ಅರ್ಹತೆ ಒದಗುತ್ತದೆ. ಓರ್ವ ಮಹಿಳೆ ತನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಬಾಡಿಗೆ ತಾಯಿಯಾಗಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಬಾಡಿಗೆ ತಾಯ್ತನ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ದಂಡನಾ ಪ್ರಕ್ರಿಯೆಯ ವಿವರಗಳೂ ಮಸುದೆಯಲ್ಲಿದೆ.
ಕಾಂಗ್ರೆಸ್ ಮತ್ತು ಎಐಎಡಿಎಂಕೆ ಸದಸ್ಯರು ಮಸೂದೆಯ ವಿವಿಧ ಅಂಶಗಳ ಕುರಿತಂತೆ  ಗದ್ದಲದ ಪ್ರತಿಭಟನೆ ಮಡೆಸಿದ್ದರು. ಇದರ ನಡುವೆ ಸುಮಾರು ಒಂದು ಗಂಟೆ ಅವಧಿಯ ಚರ್ಚೆಯ ನಂತರ ಮಸೂದೆ ಅಂಗೀಕಾರವಾಗಿದೆ.
"ಮಸೂದೆಯು ಮಹಿಳೆಯರ ಶೋಷಣೆಯನ್ನು ತಡೆಯಬಲ್ಲದು, ಬಾಡಿಗೆ ತಾಯಿಯ ಮೂಲಕ ಜನ್ಮಿಸಿದ ಮಗುವಿನ ಹಕ್ಕುಗಳನ್ನು ಖಾತ್ರಿಗೊಳಿಸುತ್ತದೆ.  ಸಮಾಜದ ಎಲ್ಲಾ ವರ್ಗಗಳಿಂದ ಈ ಮಸೂದೆಗಾಗಿ ಬೇಡಿಕೆ ಇತ್ತು" ನಡ್ಡಾ ಹೇಳಿದ್ದಾರೆ.ವಾಣಿಜ್ಯೋದ್ದೇಶದ ಬಾಡಿಗೆ ತಾಯ್ತನವನ್ನು ಮಸೂದೆ ಸಂಪೂರ್ಣವಾಗಿ ನಿಷೇಧಿಸುತ್ತದೆ. ಆದರೆ ಕಠಿಣ ನಿಯಮಾವಳಿಯ ಅಡಿಯಲ್ಲಿ ಅತ್ಯಂತ ಅಗತ್ಯವಾಗಿರುವ ದಂಪತಿಗಳಿಗೆ ಪರಹಿತಚಿಂತನೆಯ ಬಾಡಿಗೆ ತಾಯ್ತನಕ್ಕೆ ಅವಕಾಶ ಕಲ್ಪಿಸಲಾಗಿದೆ.ಭಾರತೀಯರು ಮಾತ್ರ ಈ ಸೌಲಭ್ಯ ಹೊಂದಲು ಅನುಮತಿ ಇದ್ದು ವಿದೇಶಿಗರು, ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ವ್ಯಕ್ತಿಗಳಿಗೆ ಈ ಸೌಲಭ್ಯ ಬಳಕೆಗೆ ಯಾವುದೇ ಅನುಮತಿ ಇರುವುದಿಲ್ಲ.
ಸಲಿಂಗಿಗಳು, ಸಿಂಗಲ್ ಪೇರೆಂಟ್ ವ್ಯಕ್ತಿಗಳು ಹಾಗೂ ಲಿವ್ ಇನ್ ಟುಗೆದರ್ ಜೋಡಿಗಳಿಗೆ ಸಹ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಲು ಮಸೂದೆ ಅವಕಾಶ ನೀಡಲಾರದು. ಮಕ್ಕಳಿರುವ ದಂಪತಿಗಳು ಸಹ ಇದಕ್ಕೆ ಹೊರತಾಗಿಲ್ಲ. ಅವರು ಇನ್ನೊಂದು ಮಗುವನ್ನು ಬೇಕಾದಲ್ಲಿ ದತ್ತು ಸ್ವೀಕಾರ ಮಾಡಬಹುದಾಗಿದೆ.
ಒಮ್ಮೆ ಮಸೂದೆ ಜಾರಿಯಾದ ಬಳಿಕ ರಾಷ್ಟ್ರೀಯ ಸರೊಗಸಿ ಮಂಡಳಿಯನ್ನು ರಚಿಸಲಾಗುವುದು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹ ಆಯಾ ಮಟ್ಟದ ಮಂಡಳಿ ರಚನೆಯಾಗಲಿದೆ.ಕೇಂದ್ರ ಸರ್ಕಾರ ಸೂಚನೆ ನೀಡಿದ ಮೂರು ತಿಂಗಳಲ್ಲಿ ಆಯಾ ರಾಜ್ಯಗಳು ಮಂಡಳಿ ರಚನೆ ಮಾಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com