ಈಶಾನ್ಯ ವಲಯ ಸೇರಿದಂತೆ ದೇಶದಲ್ಲಿನ ಭದ್ರತಾ ವ್ಯವಸ್ಥೆ ಸುಧಾರಣೆ- ರಾಜನಾಥ್ ಸಿಂಗ್

ಈಶಾನ್ಯ ಭಾಗ ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ತೀವ್ರಗತಿಯಲ್ಲಿ ಸುಧಾರಣೆಯಾಗಿರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಗುಜರಾತ್ : ಈಶಾನ್ಯ ಭಾಗ ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ತೀವ್ರಗತಿಯಲ್ಲಿ ಸುಧಾರಣೆಯಾಗಿರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.  

ಪೊಲೀಸ್ ಮಹಾನಿರ್ದೇಶಕರುಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ  ಭದ್ರತಾ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಯಾಗಿದೆ. ಹಿಂಸಾಚಾರ ಪ್ರಕರಣಗಳು ತಗ್ಗಿವೆ. ಅಸ್ಸಾಂನಲ್ಲಿ ಶಾಂತ ಪರಿಸ್ಥಿತಿ ಇದ್ದು, ದೇಶದಲ್ಲಿನ ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆ ಬಗ್ಗೆ ತಮ್ಮಗೆ ಸಮಾಧಾನ ಇರುವುದಾಗಿ ಹೇಳಿದರು.
ಇದಕ್ಕೂ ಮುನ್ನಾ ಟ್ವೀಟ್ ಮಾಡಿದ ರಾಜನಾಥ್ ಸಿಂಗ್,  ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ  ಉಗ್ರರ ಮೂಲ ಸೌಕರ್ಯಗಳು ಹಾಗೆಯೇ  ಉಳಿದಿವೆ ಮತ್ತು ಜಮ್ಮು ಕಾಶ್ಮೀರದಲ್ಲಿನ  ಪ್ರತ್ಯೇಕತಾವಾದಿಗಳು ಸ್ಥಳೀಯರನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಹೇಳಿದ್ದರು.
ಹಾಗಿದ್ದರೂ ಈಚಿನ ದಿನಗಳಲ್ಲಿ ಭಾರತೀಯ ಸೇನಾ ಪಡೆಯನ್ನು ಗುರಿ ಇರಿಸಿ ನಡೆಯುವ ಕಲ್ಲೆಸೆತದ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗಿವೆ' ಎಂದು ರಾಜನಾಥ್‌  ಸಿಂಗ್ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com