ಮದುವೆ ಮನೆಯಲ್ಲಿ ಪುರುಷ-ಮಹಿಳೆಯರು ಒಟ್ಟಾಗಿ ಊಟ ಮಾಡುವುದು ಇಸ್ಲಾಂ ವಿರುದ್ಧ! ಉ.ಪ್ರ. ಧರ್ಮಗುರು ಫತ್ವಾ

ಉತ್ತರ ಪ್ರದೇಶದ ಪ್ರಸಿದ್ದ ದೇವಬಂದ್‌ ಮೂಲದ ದರೂಲ್‌ ಉಲೂಮ ತನ್ನ ವಿವಾದಾತ್ಮಕ ಫತ್ವಾಗಳಿಂದಲೇ ಆಗಾಗ ಸುದ್ದಿಯಾಗುತ್ತದೆ. ಅದೇ ರೀತಿ ಈಗ ಸಹ ಇನ್ನೊಂದು ಫತ್ವಾ ಜಾರಿ ಮಾಡಿದ್ದು....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಜಾಫರ್‌ನಗರ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರಸಿದ್ದ ದೇವಬಂದ್‌ ಮೂಲದ ದರೂಲ್‌ ಉಲೂಮ ತನ್ನ ವಿವಾದಾತ್ಮಕ ಫತ್ವಾಗಳಿಂದಲೇ ಆಗಾಗ ಸುದ್ದಿಯಾಗುತ್ತದೆ. ಅದೇ ರೀತಿ ಈಗ ಸಹ ಇನ್ನೊಂದು ಫತ್ವಾ ಜಾರಿ ಮಾಡಿದ್ದು ಅದರ ಅನುಸಾರ ಮದುವೆ ಅಥವಾ ಇನ್ನಾವುದೇ ಶುಭ ಸಮಾರಂಭಗಳಲ್ಲಿ ಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದು ಇಸ್ಲಾಂ ಗೆ ವಿರುದ್ಧ  ಎಂದಿದೆ. ಇದೇ ವೇಳೆ ನಿಂತು ಊಟ ಮಾಡುವುದು ಸಹ ಧರ್ಮ ವಿರುದ್ಧ ಆವ್ಗಿದೆ ಎಂದೂ ಆದೇಶಿಸಿದೆ.
ದೇವಬಂದ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ಫತ್ವಾ ಜಾರಿಗೆ ಬಂದಿದೆ.
ಇಸ್ಲಾಮಿನ ಷರಿಯತ್‌ ಕಾನೂನಿನಂತೆ ವಿವಾಹ ಮತ್ತಿತರೆ ಸಮಾರಂಭಗಳಲ್ಲಿ ಮಹಿಳೆ ಹಾಗೂ ಪುರುಷರು ಒಟ್ಟಾಗಿ ಕುಳಿತು ಊಟ ಮಾಡುವುದು ನಿಷೇಧ. ಅಲ್ಲದೆ ನಿಂತು ಆಹಾರ ಸೇವನೆ ಮಾಡುವುದು ಸಹ ಷರಿಯತ್‌ ಕಾನೂನಿನಂತೆ ಒಪ್ಪಿತ ಕ್ರಮವಲ್ಲ ಎಂದು ಫತ್ವಾದಲ್ಲಿ ವಿವರಿಸಲಾಗಿದೆ.
ಶುಭ ಸಮಾರಂಭಗಳಲ್ಲಿ ಅಪರಿಚಿತ ಪುರುಷರಿರುವ ಕಡೆ ಮಹಿಳೆಯರು ಆಹಾರ ಸೇವನೆ ಮಾಡುವುದು ಅಥವಾ ಅಂತಹಾ ಕಾರ್ಯಕ್ರಮದಲ್ಲಿ ಭಾಗವಹಿಸ್ವುದು ಕ್ಷಮಾರ್ಹವಲ್ಲದ ಅಪರಾಧ. ಎಲ್ಲಾ ಮುಸ್ಲೀಮರೂ ಷರಿಯತ್‌ ನಿಯಮ ಪಾಲನೆ ಮಾಡಬೇಕು. ಹಾಗಾಗಿ ಪ್ರತಿಯೊಬ್ಬ ಮುಸ್ಲೀಮರೂ ಈ ಫತ್ವಾ ಅನುಸರಿಸಬೇಕು ಎಂದು ದರೂಲ್‌ ಉಲೂಮ ಧರ್ಮಗುರುಗಳು ಮನವಿ ಮಾಡಿದ್ದಾರೆ.
ಕಳೆದ್ ದಿನಗಳಲ್ಲಿ ಸಹ ಇದೇ ದರೂಲ್‌ ಉಲೂಮ ಮಹಿಳೆಯರು ವ್ಯಾಕ್ಸಿಂಗ್ ಅಥವಾ ಶೇವಿಂಗ್ ಮಾಡುವುದರ ವಿರುದ್ಧ ಫತ್ವಾ ಜಾರಿ ಮಾಡಿತ್ತು.ಷರಿಯಾ ಕಾನೂನಿನಡಿಯಲ್ಲಿ ವ್ಯಾಕ್ಸಿಂಗ್ ಮತ್ತು ಶೇವಿಂಗ್ ಅನ್ನು ಉತ್ತಮ ಎಂದು ಪರಿಗಣಿಸಲಾಗುವುದಿಲ್ಲದೇಹದ ಭಾಗಗಳಿಂದ  ವ್ಯಾಕ್ಸ್ ಮಾಡುವುದು ಅಥವಾ ಕ್ಷೌರದ ಮೂಲಕ ಕೂದಲು ತೆಗೆದುಹಾಕುವುದು ಖಿಲಾಫ್-ಎ-ಅದಾಬ್ (ಸಂಸ್ಕೃತಿಯ ವಿರುದ್ಧ), ಎಂದು ಅದು ಭಾವಿಸಿತ್ತು. ಅಲ್ಲದೆ ಮುಸ್ಲಿಂ ಮಹಿಳೆಯರು ಪುರುಷರು ಇರುವ ಬಳೆ ಅಂಗಡಿಗಳಲ್ಲಿ ಬಳೆ ಖರೀದಿಸುವಂತಿಲ್ಲ, ಒಂದು ವೇಳೆ ಖರೀದಿಸಿದರೂ ಅವರಿಂದ ಬಳೆ ಹಾಕಿಸಿಕೊಳ್ಳುವಂತಿಲ್ಲ ಎಂದೂ ಫತ್ವಾ ಹೊರಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com