ರಾಹುಲ್ ಈಶ್ವರ್
ರಾಹುಲ್ ಈಶ್ವರ್

ಕೇರಳ: ಶಬರಿಮಲೆ ಉಳಿಸಿ ಹೋರಾಟಗಾರ ರಾಹುಲ್ ಈಶ್ವರ್ ಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು

ಅಕ್ಟೋಬರ್ ತಿಂಗಳಲ್ಲಿ ಶಬರಿಮಲೆಯಲ್ಲಿ ನಡೆದಿದ್ದ ಹಿಂಸಾತ್ಮಾಕ ಪ್ರತಿಭಟನೆ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ ಅಯ್ಯಪ್ಪ ಧರ್ಮ ಸೇನಾ ಮುಖಂಡ ರಾಹುಲ್ ಈಶ್ವರ್ ಗೆ ಇಲ್ಲಿನ ಹೈಕೋರ್ಟ್ ಇಂದು ಜಾಮೀನು ನೀಡಿದೆ.

ಕೇರಳ: ಅಕ್ಟೋಬರ್ ತಿಂಗಳಲ್ಲಿ ಶಬರಿಮಲೆಯಲ್ಲಿ ನಡೆದಿದ್ದ ಹಿಂಸಾತ್ಮಾಕ ಪ್ರತಿಭಟನೆ  ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ ಅಯ್ಯಪ್ಪ ಧರ್ಮ ಸೇನಾ ಮುಖಂಡ ರಾಹುಲ್ ಈಶ್ವರ್ ಗೆ ಇಲ್ಲಿನ ಹೈಕೋರ್ಟ್  ಇಂದು ಜಾಮೀನು ನೀಡಿದೆ.

ಸ್ಥಳೀಯ ನ್ಯಾಯಾಲಯವು  ಜಾಮೀನು ರದ್ದುಗೊಳಿಸಿದ ನಂತರ  ಸೋಮವಾರ ರಾಹುಲ್ ಈಶ್ವರ್ ನನ್ನು  ಬಂಧಿಸಲಾಗಿತ್ತು . ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ನ್ಯಾಯಾಧೀಶ ಸುನೀಲ್ ಥಾಮಸ್,  ಅಯ್ಯಪ್ಪ ದೇಗುಲದ ಪವಿತ್ರ  ತಾಣವಾದ ಪಂಪಾ ಬಳಿಗೆ ಹೋರಾಟಗಾರರು ಪ್ರವೇಶಿಸದಂತೆ  ನಿರ್ದೇಶನ ನೀಡಿದ್ದಾರೆ.

ಅಲ್ಲದೇ  ಪಥನಂತಿಟ್ಟ ಠಾಣೆಯಲ್ಲಿ ಪ್ರತಿ ತಿಂಗಳು ಸಹಿ ಹಾಕುವಂತೆ ನ್ಯಾಯಾಧೀಶರು ರಾಹುಲ್ ಈಶ್ವರ್ ಗೆ ಸೂಚನೆ ನೀಡಿದ್ದಾರೆ. ಪಾಲಕ್ಕಡ್ ನಲಿದ್ದ ರಾಹುಲ್ ಈಶ್ವರ್ ನನ್ನು ಪೊಲೀಸರು ಸೋಮವಾರ ಬಂಧಿಸಿದ್ದರು.

ಅಯ್ಯಪ್ಪ ದೇಗುಲಕ್ಕೆ ಎಲ್ಲಾ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನದ ವಿರುದ್ಧ ಅಯ್ಯಪ್ಪ ಧರ್ಮ ಸೇನಾ ಮುಖಂಡ ರಾಹುಲ್ ಈಶ್ವರ್  ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com