ದೇಶದ ಆರ್ಥಿಕತೆಯನ್ನು ಎತ್ತರಿಸುವ ಸುವರ್ಣ ಅವಕಾಶವನ್ನು ಮೋದಿ ಕಳೆದುಕೊಂಡರು: ಯಶವಂತ್ ಸಿನ್ಹಾ

ನೋಟ್ ಅಮಾನ್ಯತೆ ಅತ್ಯಂತ ದೊಡ್ಡ ಬ್ಯಾಂಕ್ ಹಗರಣವಾಗಿದ್ದು, ಆರ್ ಬಿಐ ಸ್ವಾಯತ್ತತೆ ತೀವ್ರ ಅಪಾಯದಲ್ಲಿದೆ. ಜಿಡಿಪಿ ಸಂಖ್ಯೆಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ತಮ್ಮ ಹೊಸ ಪುಸ್ತಕದಲ್ಲಿ ಹೇಳಿದ್ದಾರೆ.
ಯಶವಂತ ಸಿನ್ಹಾ
ಯಶವಂತ ಸಿನ್ಹಾ
Updated on

ನವದೆಹಲಿ:  ನೋಟ್ ಅಮಾನ್ಯತೆ ಅತ್ಯಂತ ದೊಡ್ಡ ಬ್ಯಾಂಕ್ ಹಗರಣವಾಗಿದ್ದು, ಆರ್ ಬಿಐ ಸ್ವಾಯತ್ತತೆ ತೀವ್ರ ಅಪಾಯದಲ್ಲಿದೆ. ಜಿಡಿಪಿ ಸಂಖ್ಯೆಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ  ಯಶವಂತ ಸಿನ್ಹಾ ತಮ್ಮ ಹೊಸ ಪುಸ್ತಕದಲ್ಲಿ ಹೇಳಿದ್ದಾರೆ.

ಪ್ರಧಾನಿ  ನರೇಂದ್ರ ಮೋದಿ ಅವರ ಸ್ವಯಂ ಉದ್ಯೋಗದ ಕಲ್ಪನೆಯು ಹೆಚ್ಚಿನ  ಗಂಭೀರ ವಿಷಯವಾದ  ನಿರುದ್ಯೋಗ ಮತ್ತು ಅರೆ ಉದ್ಯೋಗದಿಂದ ಗಮನವನ್ನು ಬೇರೆಡೆಗೆ ತಿರುಗಿಸುವುದಾಗಿದೆ ಎಂದು ಯಶವಂತ ಸಿನ್ಹಾ ಹೇಳಿದ್ದಾರೆ.

ಕಳೆದೆರಡು ವರ್ಷಗಳಿಂದ ಸರ್ಕಾರಗಳ ನೀತಿಯ ವಿರುದ್ಧ ಅಸಮಾಧಾನಗೊಂಡಿದ್ದ ಯಶವಂತ ಸಿನ್ಹಾ ಏಪ್ರಿಲ್ ತಿಂಗಳಲ್ಲಿ  ಬಿಜೆಪಿ ಪಕ್ಷವನ್ನು ತೊರೆದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಂಬಂಧಿಸಿದಂತೆ ಯಶವಂತ್ ಸಿನ್ಹಾ ಮಾಡುತ್ತಿದ್ದ  ಅನೇಕ  ಆರೋಪಗಳನ್ನು ಪಕ್ಷದ ನಾಯಕರು ನಿರಾಕರಿಸಿದ್ದರು.

ದೇಶದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಇದ್ದ ಸುವರ್ಣ ಅವಕಾಶವನ್ನು  ಮೋದಿ ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿ ಮೋದಿ ಭಾರತವನ್ನು ಬಡ ರಾಷ್ಟ್ರದಿಂದ ಮಧ್ಯಮ ರಾಷ್ಚ್ರಕ್ಕೆ ಕೊಂಡೊಯ್ಯಬಹುದು ಆದರೆ, ಅವರು ತಮ್ಮಗೆ ದೊರೆತ ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿನ್ಹಾ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಎನ್ ಡಿಎ ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಹೇಗೆ ಮೋದಿ ಸರ್ಕಾರ  ಹಾದಿತಪ್ಪಿಸಿದೆ  ಎಂಬುದನ್ನು ವಿವರಿಸುತ್ತಾ , ಮೋದಿ ಸರ್ಕಾರವನ್ನು ಸಿನ್ಹಾ ಟೀಕಿಸಿದ್ದಾರೆ. ನರೇಂದ್ರ ಮೋದಿ ಅವರ  ನೋಟ್ ಅಮಾನ್ಯತೆ, ಉದ್ಯೋಗ, ಜಿಡಿಪಿ ಅಂಕಿಸಂಖ್ಯೆಗಳು, ಮೇಕ್ ಇನ್ ಇಂಡಿಯಾ ಸೇರಿದಂತೆ ಸರ್ಕಾರದ ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಯಶವಂತ ಸಿನ್ಹಾ ತೀವ್ರವಾಗಿ ಟೀಕಿಸಿದ್ದಾರೆ.

ನೋಟ್ ಅಮಾನ್ಯತೆ ನಿರ್ಧಾರ ಅಸಂಬದ್ಧವಾದದ್ದು, ಯಾವುದೇ ಆಡಳಿತ ಉದ್ದೇಶ ಹೊಂದಿರಲಿಲ್ಲ.  ಅವರ ನಿರ್ಧಾರದಿಂದ 2017ರಲ್ಲಿ ಉತ್ತರ  ಪ್ರದೇಶದಲ್ಲಿ ಮತಗಳ ವಿಭಜನೆಯಾಯಿತು. ಯಾವುದೇ ಉದ್ದೇಶ ಇಲ್ಲದೆ ಮಾಡಿದ ನೋಟ್ ಅಮಾನ್ಯತೆಯಿಂದ ಶೂನ್ಯ ಫಲಿತಾಂಶ ದೊರೆಯಿತು ಎಂದು ಸಿನ್ಹಾ ಲೇವಡಿ ಮಾಡಿದ್ದಾರೆ.

ಮೇಕ್ ಇಂಡಿಯಾ ಕಾರ್ಯಕ್ರಮವೂ ದೊಡ್ಡದಾದ ವೈಫಲ್ಯ ಕಂಡಿದೆ. ಇದು ಕೂಡಾ ಗೊತ್ತು ಗುರಿ ಇಲ್ಲದೆ ಯೋಜನೆಯಾಗಿದ್ದು, 2004ರಲ್ಲಿ ಯುಪಿಎ  ಅವಧಿಯಲ್ಲಿ ರಚಿಸಲಾಗಿದ್ದ ಉತ್ಪಾದನಾ ಸ್ಪರ್ಧಾತ್ಮಕತೆ ಕೌನ್ಸಿಲ್ ಗೂ ಮೇಕ್ ಇನ್ ಇಂಡಿಯಾ ಯೋಜನೆಗೂ ಯಾವುದೇ ವ್ಯತ್ಯಾಸ ಇಲ್ಲ ಎಂದಿದ್ದಾರೆ.

 ಶೇ. 7. 35 ರಷ್ಟು ಆರ್ಥಿಕ ಬೆಳವಣಿಗೆ ದರ ಸಾಧಿಸಿರುವುದಾಗಿ ಹೇಳಲಾಗುತ್ತಿದೆ. ಆದರೆ. ನಾಲ್ಕು ವರ್ಷಗಳ ಹಿಂದೆಯೇ ಈ ಗುರಿ ಸಾಧಿಸಲಾಗಿತ್ತು ಎಂದು ಹೇಳಿರುವ ಯಶವಂತ ಸಿನ್ಹಾ, ಜಿಎಸ್ ಟಿ ಕಲ್ಪನೆ ಉತ್ತಮವಾಗಿದೆ. ಇದು ಸರಳ ಹಾಗೂ ಕಡಿಮೆ ದರದಿಂದ ಕೂಡಿದ್ದು, ತೆರಿಗೆ ಮೇಲೆ ತೆರಿಗೆ ತೆತ್ತಬೇಕಾಗಿಲ್ಲ, ಪ್ರತಿ  ಹಂತದಲ್ಲೂ ತೆರಿಗೆ ವ್ಯವಸ್ಥೆ ಹಾಗೂ ವ್ಯವಹಾರಕ್ಕಾಗಿ ವಿಸ್ತೃತ ತೆರಿಗೆ ಹಾಕಬಹುದಾಗಿದೆ ಎಂದು ಯಶವಂತ ಸಿನ್ಹಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com