ನವದೆಹಲಿ: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ಎಲ್ಲಾ 22 ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಸಿಬಿಐ ನ್ಯಾಯಾಲಯದ ಆದೇಶದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ :ಸೊಹ್ರಾಬುದ್ದೀನ್ ಅಥವಾ ಜಸ್ಟೀಸ್ ಲೋಯಾ ಅವರನ್ನು ಯಾರೂ ಕೊಂದದ್ದಲ್ಲ್, ಅವರಾಗೇ ನಿಧನರಾಗಿದ್ದಾರೆ" ಎಂದು ಹೇಳಿದ್ದಾರೆ.
"ಹರೇನ್ ಪಾಂಡ್ಯ, ತುಲಸೀ ರಾಮ್, ಪ್ರಜಾಪತಿ, ಜಸ್ಟೀಸ್ ಲೋಯಾ, ಪ್ರಕಾಶ್ ತೊಂಬ್ರೆ, ಶ್ರೀಕಾಂತ್ ಖಂಡಾಲ್ಕರ್, ಕೌಸರ್ ಬಿ, ಸೊಹ್ರಾಬುದ್ದೀನ್ ಶೇಖ್ ಅವರುಗಳನ್ನು ಯಾರೂ ಕೊಲ್ಲಲಿಲ್ಲ, ಅವರಾಗೇ ಮರಣಿಸಿದರು" ಹೀಗೆಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ 22 ಆರೋಪಿಗಳ ವಿರುದ್ಧ ಯಾವುದೇ ದೃಢವಾದ ಸಾಕ್ಷಾಧಾರಗಳಿಲ್ಲವೆಂದು ಕಾರಣವಿತ್ತು ಸಿಬಿಐ ನ್ಯಾಯಾಲಯ ಶುಕ್ರವಾರ ಎಲ್ಲಾ ಆರೋಪಿಗಳ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿತ್ತು.
ನಕಲಿ ಎನ್ ಕೌಂಟರ್ ನಡೆದಿದ್ದ ವೇಳೆ ಗುಜರಾತ್ ಗೃಹ ಸಚಿವರಾಗಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜಸ್ಥಾನದ ಮಾಜಿ ಗೃಹಸಚಿವ ಜಿ.ಸಿ. ಕಟಾರಿಯಾ, ಉನ್ನತ-ಮಟ್ಟದ ಎಟಿಎಸ್ ಅಧಿಕಾರಿ ಹಾಗೂ ಡಿಐಜಿ ಡಿಜಿ ವಂಝಾರಾ, ಪೋಲೀಸ್ ಸೂಪರಿಟೆಂಡೆಂಟ್ ಎಂ.ಎನ್. ದಿನೇಶ್ ಹಾಗೂ ಆರ್.ಕೆ. ಪಾಂಡಿಯನ್ ಸೇರಿ ಪ್ರಕರಣದಲ್ಲಿ ಭಾಗಿಯಾದವರೆಲ್ಲರೂ ಆರೋಪಮುಕ್ತರಾಗಿದ್ದಾರೆ.