ರಾಮಾಯಣ ಪಾತ್ರಗಳು ಜಾತಿ ಪ್ರಮಾಣಪತ್ರ ಸಿದ್ಧಮಾಡಿಕೊಳ್ಳುವುದು ಉತ್ತಮ: ಶಿವಸೇನೆ

ಹನುಮಂತನ ಜಾತಿಯ ಬಗ್ಗೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದು, ಈ ಬಗ್ಗೆ ವ್ಯಂಗ್ಯ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ರಾಮಾಯಣದ ಪಾತ್ರಗಳು ಜಾತಿ ಪ್ರಮಾಣಪತ್ರವನ್ನು ಸಿದ್ಧಮಾಡಿಟ್ಟುಕೊಳ್ಳಬೇಕೆಂದು
ಶಿವಸೇನೆ
ಶಿವಸೇನೆ
ಮುಂಬೈ: ಹನುಮಂತನ ಜಾತಿಯ ಬಗ್ಗೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದು, ಈ ಬಗ್ಗೆ ವ್ಯಂಗ್ಯ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ರಾಮಾಯಣದ ಪಾತ್ರಗಳು ಜಾತಿ ಪ್ರಮಾಣಪತ್ರವನ್ನು ಸಿದ್ಧಮಾಡಿಟ್ಟುಕೊಳ್ಳಬೇಕೆಂದು ಹೇಳಿದೆ. 
ಹನುಮಂತನ ಜಾತಿಯ ಬಗ್ಗೆ ನಡೆಯುತ್ತಿರುವ ಚರ್ಚೆ ಅಸಮರ್ಥನೀಯವಾದದ್ದು. ಹನುಮಂತನಿಗೆ ಜಾತಿಪಟ್ಟಿ ಅಂಟಿಸುವ ಮೂಲಕ ಉತ್ತರ ಪ್ರದೇಶದಲ್ಲಿ ಹೊಸ ರಾಮಾಯಣವನ್ನು ಬರೆಯಲು ಹೊರಟಿದ್ದಾರೆ. ಈ ಪ್ರಯತ್ನವನ್ನು ತಡೆಯಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ಇನ್ನಷ್ಟೇ ನಿರ್ಮಾಣವಾಗಬೇಕಿದೆ. ಆದರೆ ಬಿಜೆಪಿಯಲ್ಲಿ ಹನುನಂತನ ಜಾತಿಯ ಬಗ್ಗೆ ಚರ್ಚೆ ನಡೆಯಲು ಪ್ರಾರಂಭವಾಗಿದೆ. ಹನುಮಂತನ ಜಾತಿ, ಧರ್ಮದ ಬಗ್ಗೆ ಚರ್ಚೆ ನಡೆಸಿ ಏನಾಗಬೇಕಿದೆ? ಎಂದು ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಶಿವಸೇನೆ ಪ್ರಶ್ನಿಸಿದೆ. 
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪಂಚ ರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹನುಮಂತ ದಲಿತನಾಗಿದ್ದ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಹನುಮಂತ ನಮ್ಮ ಜಾತಿಗೆ ಸೇರಿದವನೆಂದು ಹಲವು ಹಕ್ಕು ಪ್ರತಿಪಾದನೆಗೆ ಮುಂದಾಗಿದ್ದರು. ಇದಾದ ಬಳಿಕ ಬಿಜೆಪಿಯ ಉತ್ತರ ಪ್ರದೇಶದ ಎಂಎಲ್ ಸಿ ನವಾಬ್, ಹನುಮಂತ ಮುಸ್ಲಿಂ ಸಮುದಾಯದ ಸೇರಿದವನೆಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com