ತೂತುಕುಡಿ ಹಿಂಸಾಚಾರ: ಅರ್ಧದಷ್ಟು ಮಂದಿಗೆ ಹಿಂಭಾಗದಿಂದ ಗುಂಡೇಟು, ಶವಪರೀಕ್ಷೆ ವರದಿ ಬಹಿರಂಗ

ಮೇ 22 ರಂದು ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದ್ದ ವೇದಾಂತ ಗ್ರೂಪ್ ವಿರೋಧಿ ಪ್ರತಿಭಟನೆಯವೇಳೆ ಪೋಲೀಸ್ ಗುಂಡೇಟಿನಿಂದ ಸಾವಿಗೀಡಾಗಿದ್ದ 12 ಮಂದಿಯ ಶವಪರೀಕ್ಷೆ.....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತೂತುಕುಡಿ:: ಮೇ 22 ರಂದು ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದ್ದ ವೇದಾಂತ ಗ್ರೂಪ್ ವಿರೋಧಿ ಪ್ರತಿಭಟನೆಯವೇಳೆ ಪೋಲೀಸ್ ಗುಂಡೇಟಿನಿಂದ ಸಾವಿಗೀಡಾಗಿದ್ದ  12 ಮಂದಿಯ ಶವಪರೀಕ್ಷೆ ವರದಿಗಳು ಬಹಿರಂಗವಾಗಿದೆ.  12 ಮಂದಿ ಪ್ರತಿಭಟನಾಕಾರರ ತಲೆ ಹಾಗೂ ಎದೆ ಭಾಗಕ್ಕೆ ಬುಲೆಟ್ ಗಳು ಹೊಕ್ಕಿದ್ದು ಅವರು ಸಾವಿಗೀಡಾಗಿದ್ದಾರೆ.ಅದರಲ್ಲಿ ಅರ್ಧದಷ್ಟು ಮಂದಿಗೆ ಹಿಂಭಾಗದಿಂದ ಗುಂಡು ಹಾರಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. 
ಹಲವಾರು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ವಿಧಿ  ವಿಜ್ಞಾನದ ತಜ್ಞರು  ಈ ಶವಪರೀಕ್ಷೆ ವರದಿಗಳನ್ನು ನಿರ್ಮಿಸಿದ್ದಾರೆ ಇನ್ನೂ ಇಬ್ಬರು ತಮ್ಮ ತಲೆಯ ಬದಿಗಳನ್ನು ಬುಲೆಟ್ ಗಳು ಹೊಕ್ಕಿದ್ದು ಅವರು ಸಾವಿಗೀಡಾಗಿದ್ದಾರೆ.
ಪ್ರತಿಭಟನೆಯಲ್ಲಿ ಸಾವಿಗೀಡಾಗಿದ್ದ ಅತ್ಯಂತ ಕಿರಿಯ ವ್ಯಕ್ತಿ ಜೆ. ಸ್ನೋಲಿನ್ ದೇಹಕ್ಕೆ ಹಿಂಭಾಗದಿಂದ ಪ್ರವೇಶಿಸಿದ್ದ ಬುಕೆಟ್ ಬಾಯಿಯ ಮೂಲಕ ಹೊರಬಂದಿದೆ. 40 ರ ಹರೆಯದ ಜಾನ್ಸಿ ಅವರು ಸಮುದ್ರ ತೀರಕ್ಕೆ ಸಮೀಪವಿರುವ ತನ್ನ ಮನೆಯ ಬಳಿ ಕಿರಿದಾದ ಬೀದಿಯಲ್ಲಿ ನಡೆಯುತ್ತಿದ್ದಾಗ ಗುಂಡೇಟಿಗೆ ಬಲಿಯಾಗಿದ್ದರು ಎಂದು ಶವಪರೀಕ್ಷೆ ವರದಿ ವಿವರಿಸಿದೆ.
ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ನಿರ್ದೇಶನದಂತೆ, 13 ಜನರ ಸಾವಿಗೆ ಕಾರಣವಾಗಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸುವುದಕ್ಕೆ ಅಕ್ಟೋಬರ್ 8 ರಂದು ಕೇಂದ್ರೀಯ ತನಿಖಾ ದಳ (ಸಿಬಿಐ)ಮುಂದಾಗಿದೆ.
ತಮಿಳುನಾಡು ಸರ್ಕಾರ ವೇದಾಂತಸರ್ಲೈಟ್ ರ್ ಸ್ಥಾವರವನ್ನು ಭಾರೀ ಪ್ರತಿಭಟನೆ ಹಾಗೂ ಹಿಂಸಾಚಾರದ ಬಳಿಕ ಪರಿಸರ ಹಾನಿಯ್ತ ಆಧಾರದ ಮೇಲೆ ಮುಚ್ಚಲು ಆದೇಶಿಸಿತ್ತು. ಆದರೆ ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) ಡಿಸೆಂಬರ್ 15 ರಂದು ಸರ್ಕಾರಸ್ದ ಆದೇಶವನ್ನು ವಿರೋಧಿಸಿದ್ದು ಆದೇಶ ರದ್ದಿಗೆ ಸೂಚನೆ ನೀಡಿದ ಕಾರಣ ಸರ್ಕಾರ ತನ್ನ ಆದೇಶವನ್ನು ರದ್ದುಪಡಿಸಿದೆ.ಆದಾಗ್ಯೂ, ಡಿಸೆಂಬರ್ 11 ರಂದು, ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ಇನ್ನೊಂದು ತಿಂಗಳು ಸಂಸ್ಥೆಯನ್ನು ತೆರೆಯುವಂತಿಲ್ಲ.ಪರಿಸರವಾದಿಗಳ  ಮನವಿ ಕೇಳುವವರೆಗೂಕಾರ್ಖಾನೆ ಪ್ರಾರಂಭಿಸಬಾರದು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com