ಗುಜರಾತ್ ನಲ್ಲಿ ಮಕಾಡೆ ಮಲಗಿದ ಮಹಾಘಟಬಂಧನ: ಉಪಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ!

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಗುಜರಾತ್ ನ ಉಪಚುನಾವಣೆಯಲ್ಲಿ ಮಹಾಘಟಬಂಧನವನ್ನು ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದೆ.
ಗುಜರಾತ್ ನಲ್ಲಿ ಮಕಾಡೆ ಮಲಗಿದ ಮಹಾಘಟಬಂಧನ: ಉಪಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ!
ಗುಜರಾತ್ ನಲ್ಲಿ ಮಕಾಡೆ ಮಲಗಿದ ಮಹಾಘಟಬಂಧನ: ಉಪಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ!
ಅಹಮದಾಬಾದ್: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಗುಜರಾತ್ ನ ಉಪಚುನಾವಣೆಯಲ್ಲಿ ಮಹಾಘಟಬಂಧನವನ್ನು ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದೆ. 
ಗುಜರಾತ್ ನ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಈಗ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಬಳಿ ಭರ್ತಿ 100 ಶಾಸಕರಿದ್ದಾರೆ. ಜಸ್ದಾನ್ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕುನಾರ್ಜಿ ಬವಾಲಿಯಾ ಕಾಂಗ್ರೆಸ್ ನ ಅಭ್ಯರ್ಥಿ ಅವ್ಸರ್ ನಕಿಯಾ ಅವರನ್ನು 19,779 ಮತಗಳ ಅಂತರದಿಂದ ಸೋಲಿಸಿದ್ದಾರೆ. 
ಬವಾಲಿಯಾ 2017 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಕೇವಲ 3 ಗಂಟೆಗಳಲ್ಲಿ ಬವಾಲಿಯಾಗೆ ರುಪಾನಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿತ್ತು. ಇದೀಗ ಜಸ್ದಾನ್ ಉಪಚುನಾವಣೆಯಲ್ಲಿ ಬಿಜೆಪಿ ಮತ್ತೊಂದು ಸ್ಥಾನ ಹೆಚ್ಚು ಗಳಿಸಿ 100 ಶಾಸಕರನ್ನು ಹೊಂದಿದ್ದರೆ 2017 ರ ಚುನಾವಣೆಯಲ್ಲಿ 77 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ಶಾಸಕರ ಸಂಖ್ಯೆ ಈಗ 76 ಕ್ಕೆ ಇಳಿಕೆಯಾಗಿದೆ. ಬವಾಲಿಯಾಗೆ 90,262 ಮತಗಳು ಲಭಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ನಕಿಯಾಗೆ 70,283 ಮತಗಳು ಸಿಕ್ಕಿದ್ದು 2,146 ನೋಟಾ ಮತಗಳು ಚಲಾವಣೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com