2019 ಲೋಕಸಭಾ ಚುನಾವಣೆ: ಮಹಾರಾಷ್ಟ್ರದಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್, 48ರಲ್ಲಿ ಎನ್ ಸಿಪಿ ಸ್ಪರ್ಧೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ 40 ಹಾಗೂ ಎನ್ ಸಿಪಿ 48 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಉಭಯ ಪಕ್ಷಗಳು ಒಪ್ಪಂದ ಮಾಡಿಕೊಂಡಿವೆ.
ಶರದ್ ಪವಾರ್
ಶರದ್ ಪವಾರ್

ಗೊಂದಿಯಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ 40 ಹಾಗೂ ಎನ್ ಸಿಪಿ 48 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಉಭಯ ಪಕ್ಷಗಳು ಒಪ್ಪಂದ ಮಾಡಿಕೊಂಡಿವೆ.

ಸುದ್ದಿಸಂಸ್ಥೆಯೊಂದಕ್ಕೆ ಈ ವಿಷಯಕ್ಕೆ ತಿಳಿಸಿರುವ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್, ಮಹಾರಾಷ್ಟ್ರದಲ್ಲಿ ಎನ್ ಸಿಪಿ ಹಾಗೂ ಕಾಂಗ್ರೆಸ್  ಒಟ್ಟಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸುವುದಾಗಿ ತಿಳಿಸಿದರು.

 40 ಕ್ಷೇತ್ರಗಳ ಹಂಚಿಕೆ ಪೂರ್ಣಗೊಂಡಿದೆ. ಇನ್ನೂ 8 ಉಳಿದಿವೆ. ಒಂದು ವೇಳೆ ಈ  ಕ್ಷೇತ್ರಗಳ ಬಗ್ಗೆ ಒಮ್ಮತ ಮೂಡದಿದ್ದಲ್ಲಿ  ದೆಹಲಿಯಲ್ಲಿ ಉಭಯ ಪಕ್ಷಗಳ ಮುಖ್ಯಸ್ಥರು ಚರ್ಚೆ ಮಾಡುವ ಮೂಲಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 2014 ರಲ್ಲಿ ನಡೆದಿದ್ದ  ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ 27 ಹಾಗೂ ಎನ್ ಸಿಪಿ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com