ಮಧ್ಯಮ ವರ್ಗದ ಕುರಿತ ಪ್ರಶ್ನೆಯಿಂದ ಮೋದಿ ನುಣುಚಿಕೊಂಡಿದ್ದೇಕೆ: ರಾಹುಲ್ ಗಾಂಧಿ

ತಮಿಳುನಾಡಿನ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ ತಮಗೆ ಕೇಳಲಾದ ಪ್ರಶ್ನೆಯಿಂದ ಮೋದಿ ನುಣುಚಿಕೊಂಡಿದ್ದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಮಧ್ಯಮ ವರ್ಗದ ಕುರಿತ ಪ್ರಶ್ನೆಯಿಂದ ಮೋದಿ ನುಣುಚಿಕೊಂಡಿದ್ದೇಕೆ: ರಾಹುಲ್ ಗಾಂಧಿ
ಮಧ್ಯಮ ವರ್ಗದ ಕುರಿತ ಪ್ರಶ್ನೆಯಿಂದ ಮೋದಿ ನುಣುಚಿಕೊಂಡಿದ್ದೇಕೆ: ರಾಹುಲ್ ಗಾಂಧಿ
ಚೆನ್ನೈ: ತಮಿಳುನಾಡಿನ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ ತಮಗೆ ಕೇಳಲಾದ ಪ್ರಶ್ನೆಯಿಂದ ಮೋದಿ ನುಣುಚಿಕೊಂಡಿದ್ದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಈ ಚರ್ಚೆಗೆ ರಾಹುಲ್ ಗಾಂಧಿ ಸಹ ಧ್ವನಿಗೂಡಿಸಿದ್ದು, ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಪತ್ರಿಕಾಗೋಷ್ಠಿ ನಡೆಸುವುದನ್ನು ಬಿಡಿ, ಬೂತ್ ಮಟ್ಟದ ಕಾರ್ಯಕರ್ತರ ಪ್ರಶ್ನೆಗೂ ಉತ್ತರಿಸುವುದಕ್ಕೆ ವಿಫಲರಾಗಿದ್ದಾರೆ ಎಂದು ಟ್ವೀಟ್ ನಲ್ಲಿ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ. 
ಬಿಜೆಪಿ ಕಾರ್ಯಕರ್ತ ನಿರ್ಮಲ್ ಕುಮಾರ್ ಜೈನ್ ಎಂಬುವವರು ಪ್ರಧಾನಿ ಮೋದಿಯೊಂದಿಗೆ ಮಾತನಾಡುತ್ತಾ, ಆದಾಯ ತೆರಿಗೆಯಲ್ಲಿ ಸಾಲ ನೀಡಿಕೆ ಪ್ರಕ್ರಿಯೆಗಳಲ್ಲಿ ತಮಗೆ ವಿನಾಯಿತಿ ಏಕೆ ನೀಡುತ್ತಿಲ್ಲ ಎಂಬುದು ಮಧ್ಯಮ ವರ್ಗದ ಜನರಿಗೆ ಅರ್ಥವಾಗುತ್ತಿಲ್ಲ. ಈ ವರ್ಗದ ಜನರಿಂದ ತೆರಿಗೆ ವಸೂಲಿ ಮಾಡಲು ಮಾತ್ರ ಸರ್ಕಾರ ಕಾಳಜಿ ವಹಿಸುತ್ತದೆ. ಇತರ ವಿಷಯಗಳಲ್ಲೂ ಈ ವರ್ಗದ ಬಗ್ಗೆ ಅಷ್ಟೇ ಕಾಳಜಿ ವಹಿಸಿ' ಎಂದು ಸಲಹೆ ನೀಡಿದರು. ಪ್ರಶ್ನೆಗೆ ಉತ್ತರಿಸಿದ್ದ 'ಧನ್ಯವಾದಗಳು ನಿರ್ಮಲ್‌ ಜೀ. ನೀವೊಬ್ಬ ವ್ಯಾಪಾರಿ. ಹೀಗಾಗಿ ಸದಾ ವ್ಯಾಪಾರ ವಹಿವಾಟಿನ ಬಗ್ಗೆಯೇ ಮಾತನಾಡುತ್ತೀರಿ. ಶ್ರಿ ಸಾಮಾನ್ಯನ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಎಂದು ಭರವಸೆ ನೀಡುತ್ತೇನೆ' ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com