ಐಎಸ್ಐಎಸ್ ಪ್ರಕರಣ: 10 ಶಂಕಿತ ಉಗ್ರರು 12 ದಿನ ಎನ್ಐಎ ವಶಕ್ಕೆ

ದೆಹಲಿ ಕೋರ್ಟ್ ಬುಧವಾರ ಬಂಧಿತರಾದ 10 ಶಂಕಿತ ಉಗ್ರರನ್ನು ಹೆಚ್ಚಿನ ವಿಚಾರಣೆಗಾಗಿ 12 ದಿನ ರಾಷ್ಟ್ರೀಯ ತನಿಖಾ....
ಜಪ್ತಿ ಮಾಡಿದ ವಸ್ತುಗಳನ್ನು ಸಾಗಿಸುತ್ತಿರುವ ಎನ್ಐಎ ಅಧಿಕಾರಿಗಳು
ಜಪ್ತಿ ಮಾಡಿದ ವಸ್ತುಗಳನ್ನು ಸಾಗಿಸುತ್ತಿರುವ ಎನ್ಐಎ ಅಧಿಕಾರಿಗಳು
ನವದೆಹಲಿ: ದೆಹಲಿ ಕೋರ್ಟ್ ಬುಧವಾರ ಬಂಧಿತರಾದ 10 ಶಂಕಿತ ಉಗ್ರರನ್ನು ಹೆಚ್ಚಿನ ವಿಚಾರಣೆಗಾಗಿ 12 ದಿನ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ವಶಕ್ಕೆ ನೀಡಿ ಗುರುವಾರ ಆದೇಶಿಸಿದೆ.
ನಿನ್ನೆ ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು, ಸ್ಫೋಟ ಹಾಗೂ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ ಆರೋಪದ ಮೇಲೆ 10 ಶಂಕಿತ ಉಗ್ರರನ್ನು ಬಂಧಿಸಿದ್ದರು. ಇಂದು ಆ 10 ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿ, ವಿಚಾರಣೆಗಾಗಿ 15 ದಿನ ತಮ್ಮ ವಶಕ್ಕೆ ನೀಡುವಂತೆ ಎನ್ಐಎ ಮನವಿ ಮಾಡಿತು. ಆದರೆ ಕೋರ್ಟ್ 10 ದಿನ ಮಾತ್ರ ಎನ್ಐಎ ವಶಕ್ಕೆ ನೀಡಿದೆ.
ಎನ್ ಐಎ ಅಧಿಕಾರಿಗಳು ಬಂಧಿತರಿಂದ ರಾಕೆಟ್ ಲಾಂಚರ್, 12 ಪಿಸ್ತೂಲ್, 120 ಅಲಾರ್ಮ್ ಹಾಗೂ 25 ಕೆಜಿ ಸ್ಪೋಟಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಐಎಸ್ಐಎಸ್ ಉಗ್ರ ಸಂಘಟನೆಯಿಂದ ಪ್ರೇರಿತವಾದ ಹರ್ಕತ್ ಉಲ್ ಹರ್ಬ್ ಇ-ಇಸ್ಲಾಂ ಎಂಬ ಉಗ್ರ ಸಂಘಟನೆ ದೆಹಲಿ ಮತ್ತುಉತ್ತರ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಹಾಗೂ ಗಣ್ಯರನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಎನ್ಐಎ ಅಧಿಕಾರಿಗಳು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com