ಭಾರತೀಯ ಕಾನೂನು ಉಲ್ಲಂಘಿಸುವ ವಿದೇಶಿ ಪತ್ರಕರ್ತರಿಗೆ ಶಿಕ್ಷೆ - ಗೃಹ ವ್ಯವಹಾರಗಳ ಸಚಿವಾಲಯ

ಭಾರತೀಯ ಕಾನೂನುಗಳನ್ನು ಉಲ್ಲಂಘಿಸುವ ವಿದೇಶಿ ಪತ್ರಕರ್ತರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ:  ಭಾರತೀಯ ಕಾನೂನುಗಳನ್ನು ಉಲ್ಲಂಘಿಸುವ ವಿದೇಶಿ  ಪತ್ರಕರ್ತರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ.
ವೀಸಾ ಕಾನೂನು ಉಲ್ಲಂಘಿಸಿ ಭಾರತದೊಳಗೆ ಪ್ರವೇಶ ಆರೋಪವನ್ನು  ರಾಯಟರ್ಸ್  ಪತ್ರಕರ್ತ ನಿರಾಕರಿಸಿದ ನಂತರ   ಗೃಹ ವ್ಯವಹಾರಗಳ  ಸಚಿವಾಲಯ ಈ ರೀತಿಯ ಹೇಳಿಕೆ ನೀಡಿದೆ.
2018ರ ಪುಲ್ಟಿಜರ್ ಪ್ರಶಸ್ತಿ ವಿಜೇತ , ಇರಾನ್ ಪ್ರಜೆ ಮ್ಯಾಕ್ ನಾಟನ್  ಜಮ್ಮು ಮತ್ತು ಕಾಶ್ಮೀರದ  ನಿಷೇಧಿತ ಪ್ರದೇಶವನ್ನು ಅನುಮತಿ ಪಡೆಯದೇ ಪ್ರವೇಶಿಸಿರುವ ಆರೋಪ ಎದುರಿಸುತ್ತಿದ್ದಾರೆ.  ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿರಬಹುದು , ಆದರೆ,  ಅವುಗಳು ಭಾರತೀಯ ಕಾನೂನು ಉಲ್ಲಂಘಿಸುವ ಪರವಾನಗಿ ಅಲ್ಲ ಎಂದು ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಕಾನೂನು ಮತ್ತು ನೀತಿಗಳ ಬಗ್ಗೆ  ವಿದೇಶಿ ಪತ್ರಕರ್ತರಿಗೆ  ಗೃಹ ಸಚಿವಾಲಯದಿಂದ ನಿರಂತರವಾಗಿ ಮಾಹಿತಿ ನೀಡಲಾಗುತ್ತದೆ. ಯಾರೇ ವಿದೇಶಿಯರಾಗಿರಲೀ  ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು, ಒಂದು ವೇಳೆ ಕಾನೂನು ಮತ್ತು ನೀತಿ ಉಲ್ಲಂಘಿಸಿದ್ದರೆ  ಅಗತ್ಯ  ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು  ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com