ನೆಚ್ಚಿನ ಚಾನೆಲ್ ಗಳ ಆಯ್ಕೆ,ಹೊಸ ದರ ಪರಿಷ್ಕರಣೆ 1 ತಿಂಗಳು ಮುಂದೂಡಿಕೆ: ಟ್ರಾಯ್

ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಬೇಕೆಂಬ ನೂತನ ಕೇಬಲ್‌ ಟಿವಿ ದರ ವ್ಯವಸ್ಥೆ ಜಾರಿಯನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:  ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಬೇಕೆಂಬ ನೂತನ ಕೇಬಲ್‌ ಟಿವಿ ದರ ವ್ಯವಸ್ಥೆ ಜಾರಿಯನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ತಿಳಿಸಿದೆ.
ನೂತನ ಕೇಬಲ್‌ ಟಿವಿ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಅರಿವಿನ ಕೊರತೆ ಇದ್ದು, ಇನ್ನೂ ಗೊಂದಲದಲ್ಲಿದ್ದಾರೆ ಎಂಬ ಕಾರಣಕ್ಕೆ, ನೂತನ ವ್ಯವಸ್ಥೆ ಜಾರಿಯನ್ನು ಫೆ.1ಕ್ಕೆ ಮುಂದೂಡಲಾಗಿದೆ ಎಂದು ಟ್ರಾಯ್‌  ಕಾರ್ಯದರ್ಶಿ ಎಸ್ ಕೆ ಗುಪ್ತ ತಿಳಿಸಿದ್ದಾರೆ.
ನೂತನ ಕೇಬಲ್‌ ಟೀವಿ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಅಂಶಗಳು ಗೊತ್ತಿಲ್ಲದ ಕಾರಣ, ಅವರು ನೂತನ ವ್ಯವಸ್ಥೆ ಬಗ್ಗೆ ಕೋರಿಕೆಯನ್ನೇ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ನೀತಿಯನ್ನು ಯಾವುದೇ ಸಮಸ್ಯೆಯಿಲ್ಲದಂತೆ, ಜಾರಿ ಮಾಡಲು ಹೆಚ್ಚುವರಿ ಸಮಯಾವಕಾಶ ಕಲ್ಪಿಸಬೇಕು ಎಂದು ಟ್ರಾಯ್‌ ಬಳಿ ಕೇಬಲ್‌ ಆಪರೇಟರ್‌ಗಳು ಮೊರೆ ಇಟ್ಟಿದ್ದರು.
ಕೇಬಲ್‌ ಆಪರೇಟರ್‌ಗಳ ಕೋರಿಕೆಯನ್ನು ಟ್ರಾಯ್‌ ಮಾನ್ಯ ಮಾಡಿದ್ದು ಜನವರಿ 31 ರವರೆಗೆ ಸಮಯಾವಕಾಶ ಕಲ್ಪಿಸಿದೆ. ನೂತನ ಕೇಬಲ್‌ ಟೀವಿ ವ್ಯವಸ್ಥೆ ಜಾರಿಯಿಂದಾಗಿ ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಇಂತಿಷ್ಟು ಹಣ ಪಾವತಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com