ಕಂಪ್ಯೂಟರ್ ಗಳ ಮೇಲೆ ನಿಗಾ: 10 ಸಂಸ್ಥೆಗಳಿಗೆ ಪೂರ್ಣ ಅಧಿಕಾರ ನೀಡಿಲ್ಲ, ಅನುಮತಿ ಅಗತ್ಯ ಎಂದ ಕೇಂದ್ರ

ಕಂಪ್ಯೂಟರ್ ಗಳ ಮಾಹಿತಿ ಮೇಲೆ ನಿಗಾ ವಹಿಸಲು ಸಿಬಿಐ ಸೇರಿದಂತೆ ಕೇಂದ್ರ ಸರ್ಕಾರದ ಯಾವುದೇ ಸಂಸ್ಥೆಗೂ ಸಂಪೂರ್ಣ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕಂಪ್ಯೂಟರ್ ಗಳ ಮಾಹಿತಿ ಮೇಲೆ ನಿಗಾ ವಹಿಸಲು ಸಿಬಿಐ ಸೇರಿದಂತೆ ಕೇಂದ್ರ ಸರ್ಕಾರದ ಯಾವುದೇ ಸಂಸ್ಥೆಗೂ ಸಂಪೂರ್ಣ ಅಧಿಕಾರ ನೀಡಿಲ್ಲ. ಕ್ರಮ ತೆಗೆದುಕೊಳ್ಳುವ ಮುನ್ನ ಅನುಮತಿ ಪಡೆಯಬೇಕಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಪ್ಯೂಟರ್ ಗಳ ಮಾಹಿತಿ ಮೇಲೆ ನಿಗಾ ವಹಿಸುವದಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಕಾನೂನು, ನಿಯಮ ಅಥವಾ ಪ್ರಕ್ರಿಯೆ ಜಾರಿಗೆ ತಂದಿಲ್ಲ ಮತ್ತು ಯಾವುದೇ ಹೊಸ ಸಂಸ್ಥೆಗೂ ಅಧಿಕಾರ ನೀಡಿಲ್ಲ. ಹಳೆಯ 10 ಸಂಸ್ಥೆಗಳಿಗೆ ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಲಾಗಿದೆ. ಯಾವುದೇ ಹೊಸ ಕಾನೂನು ಅಥವಾ ನಿಯಮ ಜಾರಿಗೆ ತಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಲ್ಲಿ ಒಂದು ಸಣ್ಣ ಕಾಮ ಅಥವಾ ಪೂರ್ಣ ವಿರಾಮವನ್ನು ಬದಲಾಯಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇತ್ತೀಚಿಗಷ್ಟೇ ಸಿಬಿಐ, ಇಡಿ ಸೇರಿದಂತೆ 10 ಸಂಸ್ಥೆಗಳಿಗೆ ಕಂಪ್ಯೂಟರ್ ಗಳ ಮೇಲೆ ನಿಗಾ ವಹಿಸುವ ಅಧಿಕಾರ ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕಳೆದ ಸೋಮವಾರ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಹ ಸಲ್ಲಿಸಲಾಗಿದೆ.
ಯಾವುದೇ ಕಂಪ್ಯೂಟರ್ ನಲ್ಲಿ ರಚಿತವಾದ, ರವಾನಿಸಲ್ಪಟ್ಟಿರುವ, ಸ್ವೀಕರಿಸಿದ ಅಥವಾ ಸಂಗ್ರಹಿಸಿದ ಮಾಹಿತಿಯ ಮೇಲೆ ನಿಗಾ ವಹಿಸಲು ಕೇಂದ್ರ ಸರ್ಕಾರ 10 ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com