ರಕ್ಷಣಾ ವ್ಯವಹಾರದಲ್ಲಿ ಸೋನಿಯಾ, ರಾಹುಲ್ ಎಂದೂ ಮಧ್ಯಪ್ರವೇಶಿಸಿಲ್ಲ: ಮಾಜಿ ರಕ್ಷಣಾ ಸಚಿವ ಎ.ಕೆ ಆಂಟನಿ

ಯುಪಿಎ ಅವಧಿಯಲ್ಲಿ ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಯಾವುದೇ ಕಾರಣಕ್ಕೆ ರಕ್ಷಣಾ ಒಪ್ಪಂದಗಳಲ್ಲಿ ಎಂದಿಗೂ ಮಧ್ಯಪ್ರವೇಶಿಸಿರಲಿಲ್ಲ ಎಂದು ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.
ಎ.ಕೆ ಆಂಟನಿ
ಎ.ಕೆ ಆಂಟನಿ
ನವದೆಹಲಿ :ಯುಪಿಎ ಅವಧಿಯಲ್ಲಿ ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಯಾವುದೇ ಕಾರಣಕ್ಕೆ ರಕ್ಷಣಾ ಒಪ್ಪಂದಗಳಲ್ಲಿ ಎಂದಿಗೂ ಮಧ್ಯಪ್ರವೇಶಿಸಿರಲಿಲ್ಲ ಎಂದು ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಟೀಕಿಸಿದ ಅವರು  ಅಗಾಸ್ಟಾ ಹಗರಣದ ಕುರಿತು ಸರ್ಕಾರ ಸುಳ್ಳೇ ಪ್ರಚಾರ ನಡೆಸಿದೆ ಎಂದು ಆರೋಪಿದ್ದಾರೆ.
ಸರ್ಕಾರ ಹಾಗೂ ಬಿಜೆಪಿಗರು ಸುಳ್ಳು ಸುದ್ದಿ ಹರಡಲು ತನಿಖಾ ಏಜನ್ಸಿಗಳನ್ನು ಬಳಸಿಕೊಳ್ಳುತ್ತಿದೆ.ಪ್ರಸ್ತುತ ಸರ್ಕಾರವು ಸುಳ್ಳನ್ನು ಹರಡುತ್ತಿದೆ ಎಂದು ಆಂಟನಿ ಹೇಳಿದರು."ಅಗಸ್ಟಾ ವೆಸ್ಟ್ಲ್ಯಾಂಡ್ ಒಪ್ಪಂದದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಯಾವ ಪಾತ್ರವನ್ನೂ ವಹಿಸಿಲ್ಲ. ಎಂದು ನಾನು ಸ್ಪಷ್ಟಪಡಿಸುತ್ತೇನೆ., ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ತಮ್ಮ ಅಧಿಕಾರಾವಧಿಯಲ್ಲಿ ಎಂದಿಗೂ ರಕ್ಷಣಾ ಒಪ್ಪಂದಗಳ ಕುರಿತು ಮಮಧ್ಯಪ್ರವೇಶಿಸಲಿಲ್ಲ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಸಂಸತ್ತಿನ ಹೊರಗೆ ಪತ್ರಕರ್ತರೊಡನೆ ಮಾತನಾಡಿದ ಆಂಟನಿ "ಯಾವುದೇ ಸತ್ಯದ ನೆಲಗಟ್ಟಿಲ್ಲದೆ ಕೇವಲ ರಾಜಕೀಯ ಕಾರಣಕ್ಕಾಗಿ ಸರ್ಕಾರ ಸೋನಿಯಾ ಅವರ ಹೆಸರನ್ನು ಹಗರಣದಲ್ಲಿ ಸೇರಿಸಲು ಬಯಸಿದೆ"ಅವರು ಹೇಳಿದರು.
ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಹೇಳಿಕೆ ಸಮರ್ಥಿಸಿಕೊಳ್ಳುವ ಮೋದಿ ಸರ್ಕಾರದ ಬಗ್ಗೆ ಅವರು ಕುಟುಕಿದ್ದಾರೆ.ವಿವಿಐಪಿ ಹೆಲಿಕಾಪ್ಟರ್ ವ್ಯವಹಾರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಕಂಪನಿಯನ್ನು ಬ್ಲ್ಯಾಕ್ ಲಿಸ್ಟ್ (ಕಪ್ಪು ಪಟ್ಟಿ)ಗೆ ಸೇರಿಸಲು ಸೂಚಿಸಿತ್ತು ಎಂದು ಮಾಜಿ ರಕ್ಷಣಾ ಸಚಿವರು ಹೇಳಿದ್ದಾರೆ. ಯುಪಿಎ ಸರ್ಕಾರ ಮಿಲಾನ್ ನ್ಯಾಯಾಲಯದಲ್ಲಿ ಕಾಪ್ಟರ್ ತಯಾರಿಕಾ ಸಂಸ್ಥೆಯ ವಿರುದ್ಧ "ಅಸಾಧಾರಣವಾಗಿ" ಹೋರಾಡಿದೆ ಮತ್ತು ಅದನ್ನು ಗೆದ್ದಿದೆ ಎಂದು ಆಂಟನಿ ಸಮರ್ಥಿಸಿಕೊಂಡಿದ್ದಾರೆ.
"ನಾವು ಒಪ್ಪಂದವನ್ನು ರದ್ದುಗೊಳಿಸಿದ್ದೇವೆ ಮತ್ತು ಕಪ್ಪುಪಟ್ಟಿಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದೆವು. ಆದರೆ ನಮ್ಮ ನಂತರ ಬಂದ ಮೋದಿ ಸರ್ಕಾರ ಮೋದಿ ಸರ್ಕಾರವು ಅಗಸ್ಟ ವೆಸ್ಟ್ಲ್ಯಾಂಡ್ ಬಗ್ಗೆ ಏನೂ ಮಾಡಲಿಲ್ಲ.ಕಂಪೆನಿಯ ವಿರುದ್ಧ ಕ್ರಮ ಜರುಗಿಸುವುದರ ಬದಲು ಕಂಪನಿಗೆ ಅವರು ಒಲವು ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಈ ಪ್ರಕರಣವನ್ನು ಮರೆಮಾಚಲು ಹೊರಟಿದ್ದರೆ ನಾವೇಕೆ ಸಿಬಿಐ ತನಿಖೆಗೆ ಆದೇಶಿಸುತ್ತಿದ್ದೆವು?ಅಲ್ಲದೆ ಹೋರಾಟ ನಡೆಸಲು ಇಟಲಿಗೆ ಏಕೆ ತೆರಳಿದ್ದೆವು ಎಂದು ಅವರು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com