ಭಾರತೀಯ ಸೇನೆ ವಿಶ್ವದಲ್ಲಿಯೇ ಅತಿ ಹೆಚ್ಚು ಶಿಸ್ತಿನಿಂದ ಕೂಡಿರುವ ಸೇನೆ: ಮೆಹಾಬೂಬಾ

ಭಾರತೀಯ ಸೇನೆ ವಿಶ್ವದಲ್ಲಿಯೇ ಅತಿ ಹೆಚ್ಚು ಶಿಸ್ತಿನಿಂದ ಕೂಡಿರುವ ಸೇನೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಾಬೂಬಾ ಮುಫ್ತಿ ಹೇಳಿದ್ದಾರೆ.
ಭಾರತೀಯ ಸೇನೆಯ (ಸಾಂದರ್ಭಿಕ ಚಿತ್ರ)
ಭಾರತೀಯ ಸೇನೆಯ (ಸಾಂದರ್ಭಿಕ ಚಿತ್ರ)
Updated on

ಜಮ್ಮು ಮತ್ತು ಕಾಶ್ಮೀರ:  ಭಾರತೀಯ ಸೇನೆ ವಿಶ್ವದಲ್ಲಿಯೇ ಅತಿ ಹೆಚ್ಚು ಶಿಸ್ತಿನಿಂದ ಕೂಡಿರುವ ಸೇನೆಯಾಗಿದೆ ಎಂದು  ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ  ಮೆಹಾಬೂಬಾ ಮುಫ್ತಿ ಹೇಳಿದ್ದಾರೆ.

ಕಣಿವೆ ರಾಜ್ಯದಲ್ಲಿ ಒಂದು ವೇಳೆ ಭದ್ರತಾ ವ್ಯವಸ್ಥೆ ಕ್ಷೀಣಿಸಿದ್ದರೆ, ಭಾರತೀಯ ಸೇನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವುದಾಗಿ ಅವರು ಹೇಳಿದ್ದಾರೆ.

ಉಗ್ರರ ಉಪಟಳ ಹಾಗೂ ಕಲ್ಲುತೂರಾಟದಂತಹ ಚಟುವಟಿಕೆಗಳು ಮರುಕಳಿಸಿದ್ದರೆ. ಏನೇ ಆದರೂ ಸರಿ, ಭಾರತೀಯ ಸೇನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗುವುದು ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

 ಕ್ಷಿಪ್ರ ಕಾರ್ಯಪಡೆ ಹಿಂತೆಗೆದುಕೊಳ್ಳುವ ಸಂಬಂಧ ಮಾತನಾಡಿದ ಅವರು,ವಿಶ್ವದಲ್ಲಿಯೇ ಭಾರತೀಯ ಸೇನೆ ಶಿಸ್ತಿನ ಸೇನೆ ಎಂದು ಹೆಸರಾಗಿದ್ದು, ಅವರ ಬಲಿದಾನದಿಂದಾಗಿ ಇಲ್ಲಿ ವಾಸಿಸಲು ಸಾಧ್ಯವಾಗಿದೆ.  ಭದ್ರತಾ ವ್ಯವಸ್ಥೆ  ಕಾಪಾಡಲು  ಭಾರತೀಯ ಸೇನೆಯೇ ಉತ್ತಮ ಸಾಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ಶೂಪಿಯಾನ್ ನಲ್ಲಿ ಅಕ್ರಮ ಗುಂಡಿನ ದಾಳಿ ವೇಳೆ ಮೂವರು ನಾಗರೀಕರು ಹಾಗೂ ಒಬ್ಬಯೋಧ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಲಾಗಿದೆ. ಕಾಶ್ಮೀರಿ ಯುವಕರನ್ನು ಉಗ್ರ ಚಟುವಟಿಕೆಗಳಿಂದ ದೂರ ಇಡಲಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com