ಈಶಾನ್ಯ ರಾಜ್ಯ ಅಭಿವೃದ್ಧಿಯಾದರಷ್ಟೇ ಭಾರತದ ಅಭಿವೃದ್ಧಿಗೆ ವೇಗ: ಪ್ರಧಾನಿ ನರೇಂದ್ರ ಮೋದಿ

ಈಶಾನ್ಯ ರಾಜ್ಯ ಅಭಿವೃದ್ಧಿಯಾದರಷ್ಟೇ ಭಾರತದ ಅಭಿವೃದ್ಧಿ ವೇಗ ಪಡೆದುಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಡ್ವಾಂಟೇಜ್ ಅಸ್ಸಾಂ-ಗ್ಲೋಬಲ್ ಇನ್ವೆಸ್ಟರ್ಸ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಅಡ್ವಾಂಟೇಜ್ ಅಸ್ಸಾಂ-ಗ್ಲೋಬಲ್ ಇನ್ವೆಸ್ಟರ್ಸ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಅಸ್ಸಾಂ: ಈಶಾನ್ಯ ರಾಜ್ಯ ಅಭಿವೃದ್ಧಿಯಾದರಷ್ಟೇ ಭಾರತದ ಅಭಿವೃದ್ಧಿ ವೇಗ ಪಡೆದುಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಗುವಾಹಟಿಯಲ್ಲಿ ಅಡ್ವಾಂಟೇಜ್ ಅಸ್ಸಾಂ-ಗ್ಲೋಬಲ್ ಇನ್ವೆಸ್ಟರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಉದ್ಯಮ ಸ್ಥಾಪನೆ ಸರಳೀಕರಣದಲ್ಲಿ ಈಶಾನ್ಯ ರಾಜ್ಯಗಳಲ್ಲೇ ಅಸ್ಸಾಂ ಮುಂಚೂಣಿಯಲ್ಲಿದೆ. ಈಗಿನ ನಾಯಕತ್ವದಲ್ಲಿ ಅಸ್ಸಾಂ ಅಭಿವೃದ್ಧಿ ಹೊಂದುತ್ತಿದೆ. ರಾಷ್ಟ್ರೀಯ ಬಿದಿರು ಮಿಷನ್ ನ್ನು ಸುಮಾರು 1300 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸುತ್ತಿದ್ದೇವೆ, ಇದರಿಂದಾಗಿ ಈಶಾನ್ಯ ರಾಜ್ಯಗಳ ರೈತರಿಗೆ ಸಹಾಯವಾಗಲಿದೆ ಎಂದು ಮೋದಿ ಹೇಳಿದ್ದಾರೆ. 
ಆಸೀಯಾನ್ ರಾಷ್ಟ್ರಗಳನ್ನು ತಲುಪಲು ಅಡ್ವಾಂಟೇಜ್ ಅಸ್ಸಾಂ ರಹದಾರಿ ಇದ್ದಂತೆ, ಈಶಾನ್ಯ ರಾಜ್ಯಗಳು ಅಭಿವೃದಿಯಾಗದೇ ಭಾರತದ ಅಭಿವೃದ್ಧಿ ವೇಗ ಪಡೆದುಕೊಳ್ಳುವುದಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com