9,730 ಕಲ್ಲು ತೂರಾಟಗಾರರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಕಾಶ್ಮೀರ ಸರ್ಕಾರ ಸಮ್ಮತಿ!

9,730 ಕಲ್ಲುತೂರಾಟಗಾರರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಕಾಶ್ಮೀರ ಸರ್ಕಾರ ನಿರ್ಧರಿಸಿದೆ.
9,730 ಕಲ್ಲು ತೂರಾಟಗಾರರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಕಾಶ್ಮೀರ ಸರ್ಕಾರ!
9,730 ಕಲ್ಲು ತೂರಾಟಗಾರರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಕಾಶ್ಮೀರ ಸರ್ಕಾರ!
ಶ್ರೀನಗರ: 9,730 ಕಲ್ಲುತೂರಾಟಗಾರರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಕಾಶ್ಮೀರ ಸರ್ಕಾರ ನಿರ್ಧರಿಸಿದೆ. 
2008-2017 ನಡುವಿನ ಅವಧಿಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಲು ಜಮ್ಮು-ಕಾಶ್ಮೀರ ಸರ್ಕಾರ ನಿರ್ಧರಿಸಿದ್ದು, ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ 1,745 ಪ್ರಕರಣಗಳನ್ನು ಷರತ್ತು ಬದ್ಧವಾಗಿ ವಾಪಸ್ ಪಡೆಯಲು ಮುಫ್ತಿ ಸರ್ಕಾರ ನಿರ್ಧರಿಸಿದೆ. 
ಇದೇ ವೇಳೆ 4,000 ಕ್ಷಮಾದಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದೂ ಮೆಹಬೂಬಾ ಮುಫ್ತಿ ತಿಳಿಸಿದ್ದು ಈ ಬಗ್ಗೆ ವಿಧಾನಸಭೆಗೆ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ. 2016 ಹಾಗೂ 2017 ರ ಅವಧಿಯಲ್ಲಿ 3,773 ಪ್ರಕರಣಗಳು ದಾಖಲಾಗಿದ್ದು, 11, 290 ಜನರನ್ನು ಬಂಧಿಸಲಾಗಿದೆ ಎಂದು ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com