ಮಹರಾಷ್ಟ್ರ: ಕೇವಲ 1 ರುಪಾಯಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಕೇವಲ ಒಂದು ರುಪಾಯಿಗಾಗಿ ನಡೆದ ಜಗಳವೊಂದು 54 ವರ್ಷದ ವ್ಯಕ್ತಿಯ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಥಾಣೆಯ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಥಾಣೆ: ಕೇವಲ ಒಂದು ರುಪಾಯಿಗಾಗಿ ನಡೆದ ಜಗಳವೊಂದು 54 ವರ್ಷದ ವ್ಯಕ್ತಿಯ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಥಾಣೆಯ ಕಲ್ಯಾಣ ಟೌನ್ ನಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಮೃತ ಮನೋಹರ್ ಗಮ್ನೆ ಅವರು ಸಮೀಪದ ಅಂಗಡಿಯಲ್ಲಿ ಮೊಟ್ಟೆ ಖರೀದಿಸಲು ತೆರಳಿದ್ದರು. ಈ ವೇಳೆ ಒಂದು ರುಪಾಯಿಗಾಗಿ ಅಂಗಡಿ ಮಾಲೀಕ ಮತ್ತು ಮನೋಹರ್ ಮಧ್ಯೆ ಜಗಳ ಆರಂಭವಾಗಿದ್ದು, ಅದು ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಥಾಣೆ ಪೊಲೀಸ್ ಪಿಆರ್ ಒ ಸುಖದ ನರ್ಕರ್ ಅವರು ತಿಳಿಸಿದ್ದಾರೆ.
ಮನೋಹರ್ ಅವರು ಮೊಟ್ಟೆಗೆ ಒಂದು ರುಪಾಯಿ ಕಡಿಮೆ ಕೊಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಅಂಗಡಿ ಮಾಲೀಕ ಮನೋಹರ್ ಅವರನ್ನು ನಿಂದಿಸಿದ್ದಾರೆ. ನಂತರ ಪುತ್ರನೊಂದಿಗೆ ವಾಪಸ್ ಬಂದ್ ಮನೋಹರ್ ಅಂಗಡಿ ಮಾಲೀಕನೊಂದಿಗೆ ಮತ್ತೊಂದು ಸುತ್ತಿನ ಜಗಳ ನಡೆಸಿದ್ದಾರೆ. ಈ ವೇಳೆ ಅಂಗಡಿ ಮಾಲೀಕನ ಪುತ್ರ ಮನೋಹರ್ ಗೆ ಒದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ನರ್ಕರ್ ಹೇಳಿದ್ದಾರೆ.
ಆರೋಪಿ ಸುಧಾಕರ್ ಪ್ರಭು(45) ಅವರನ್ನು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ನರ್ಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com