ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲು ಪಾಕ್ ನಿಂದ ವಿದ್ಯಾರ್ಥಿ ವೇತನ: ಎನ್ಐಎ

ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ನೆರೆಯ ಪಾಕಿಸ್ತಾನ ವಿದ್ಯಾರ್ಥಿ ವೇತನ ನೀಡುತ್ತಿದ್ದು, ವಿದ್ಯಾರ್ಥಿ ವೀಸಾದ ಮೇಲೆ ಪಾಕಿಸ್ತಾನದಲ್ಲಿರುವ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ನೆರೆಯ ಪಾಕಿಸ್ತಾನ ವಿದ್ಯಾರ್ಥಿ ವೇತನ ನೀಡುತ್ತಿದ್ದು, ವಿದ್ಯಾರ್ಥಿ ವೀಸಾದ ಮೇಲೆ ಪಾಕಿಸ್ತಾನದಲ್ಲಿರುವ ಹಲವು ಯುವಕರು ಉಗ್ರರ ಸಂಬಂಧಿಗಳಾಗಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ ಹೇಳಿದೆ.
ವಿದ್ಯಾರ್ಥಿ ವೀಸಾದ ಮೇಲೆ ಪಾಕಿಸ್ತಾನಕ್ಕೆ ತೆರಳುವ ವಿದ್ಯಾರ್ಥಿಗಳು ಮಾಜಿ ಉಗ್ರರ ಸಂಬಂಧಿಯಾಗಿದ್ದಾರೆ ಅಥವಾ ಈಗ ಸಕ್ರಿಯವಾಗಿರುವ ಉಗ್ರರ ಸಂಬಂಧಿಯಾಗಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಎನ್ಐಎ ತಿಳಿಸಿದೆ.
ಹುರಿಯತ್ ನಾಯಕ ಸೈಯೀದ್ ಅಲಿ ಶಾ ಗಿಲಾನಿ ಸೇರದಂತೆ ಹಲವು ಹುರಿಯತ್ ನಾಯಕರು ಕಾಶ್ಮೀರಿ ವಿದ್ಯಾರ್ಥಿಗಳಿಗೆ ವೀಸಾ ನೀಡುವಂತೆ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಗೆ ಶಿಫಾರಸು ಮಾಡಿದ್ದಾರೆ ಎಂದು ಎನ್ಐಎ ಜನವರಿ 18ರಂದು ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.
ಪಾಕಿಸ್ತಾನ ಸರ್ಕಾರದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಹಾಗೂ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ ಎಂದು ಎನ್ಐಎ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com