ನವದೆಹಲಿ: ದೀರ್ಘಕಾಲದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಬಿಜೆಪಿ ಹಿರಿಯ ಮುಖಂಡ, ಸಂಸದ ಹುಕುಮ್ ಸಿಂಗ್ ವಿಧಿವಶರಾಗಿದ್ದಾರೆ.
79 ವರ್ಷದ ಹುಕುಮ್ ಸಿಂಗ್ ಅವರು ಕಳೆದ ಒಂದು ತಿಂಗಳಿನಿಂದ ನೋಯ್ಡಾದ ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ವಿಧಿವಶರಾಗಿದ್ದಾರೆ.
ಹುಕುಮ್ ಸಿಂಗ್ ಉತ್ತರ ಪ್ರದೇಶದ ಕೈರಾನಾ ಸಂಸದೀಯ ಕ್ಷೇತ್ರದಿಂದ ಪ್ರತಿನಿಧಿಸುತ್ತಿದ್ದರು. ಹುಕುಮ್ ಸಿಂಗ್ ಅವರು ಮೂಲತಃ ಕಾಂಗ್ರೆಸಿಗರಾಗಿದ್ದರು. 1996ರಲ್ಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಹಿರಿಯ ಮುಖಂಡನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.