ಮಣಿಪುರ: ಆರನೇ ತರಗತಿ ವಿದ್ಯಾರ್ಥಿಯಿಂದ ಅನುಪಯುಕ್ತ ವಸ್ತು ಬಳಸಿ ರೋಬೋಟ್ ತಯಾರಿ

ಳೆಯ ಅನುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್ ನ ಬಿಡಿ ಭಾಗಗಳನ್ನು ಬಳಸಿಕೊಂಡು ಮಣಿಪುರದ ವಿದ್ಯಾರ್ಥಿಯೊಬ್ಬ ರೋಬೋಟ್ ತಯಾರು ಮಾಡಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಣಿಪುರ: ಹಳೆಯ ಅನುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್ ನ ಬಿಡಿ ಭಾಗಗಳನ್ನು ಬಳಸಿಕೊಂಡು ಮಣಿಪುರದ ವಿದ್ಯಾರ್ಥಿಯೊಬ್ಬ ರೋಬೋಟ್  ತಯಾರು ಮಾಡಿದ್ದಾನೆ.
ಯಾರಾಲ್ಪತ್ ನ ಮೆಗಾ ಮಣಿಪುರ ಸ್ಕೂಲ್ ನಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಭಿನಂದನ್ ದಾಸ್ ಎನ್ನುವ ವಿದ್ಯಾರ್ಥಿ ಈ ರೋಬೋಟ್ ತಯಾರು ಮಾಡಿದ್ದಾನೆ. 
ಪಶ್ಚಿಮ ಇಂಪಾಲ್ ನ ಥಿಂಗ್ನಾಮ್ ಲೈಕೈನಲ್ಲಿ ವಾಸ್ತವ್ಯವಿರುವ ಈ ವಿದ್ಯಾರ್ಥಿ "ಟಿವಿ ಕಾರ್ಯಕ್ರಮವೊಂದರಲ್ಲಿ ಇದೇ ರೀತಿಯ ರೋಬೋಟ್ ತಯಾರಿ ಬಗೆಗೆ ತೋರಿಸಿದ್ದರು. ಅದರಿಂದ ಸ್ಪೂರ್ತಿ ಪಡೆದು ನಾನು ಸಹ ರೋಬೋಟ್ ತಯಾರಿಸಿದೆ ಎಂದಿದ್ದಾನೆ. ಈ ರೋಬೋಟ್ ಗೆ ಮೇಘನಂದ್-18. ಎಂದು ಹೆಸರಿಡಲಾಗಿದೆ.
"ಈ ರೋಬೋಟ್ ಗೆ ಮೇಘಾನಂದ್-18 ಎಂದು ಹೆಸರಿಟ್ಟಿದ್ದೇನೆ. ಇದರಲ್ಲಿ ಮೆಗಾ ಎಂದರೆ ಮೆಗಾ ಮಣಿಪುರ್ ಸ್ಕೂಲ್, ಆನಂದ್ ಎಂದರೆ ಅಭಿನಂದನ್ ಹಾಗೂ 18 ಎಂದರೆ 2018." ವಿದ್ಯಾರ್ಥಿ ಅಭಿನಂದನ್ ದಾಸ್ ವಿವರಿಸಿದ್ದಾನೆ.
ಅಭಿನಂದನ್ ಈ ರೋಬೋಟ್ ನಿರ್ಮಿಸಲು ಸುಮಾರು 15 ರಿಂದ 20 ದಿನ ತೆಗೆದುಕೊಂಡಿದ್ದಾನೆ. ಆದರೆ ಇದಕ್ಕಾಗಿ ಆತ ಯಾವುದೇ ವೃತ್ತಿಪರ ಸಹಾಯ ಪಡೆದಿಲ್ಲ. ಇಂದು ಆ ರೋಬೋಟ್ ಒಂದು ಗ್ಲಾಸ್ ನೀರನ್ನು ಸಹ ಹಿಡಿದುಕೊಳ್ಳುತ್ತದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. 
ಸಿರಿಂಜ್ ಗಳು, ಹಾರ್ಲಿಕ್ಸ್ ಬಾಟಲಿ, ಅನುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್ ನ ಬಿಡಿ ಭಾಗಗಳು, ಎಲ್ ಇಡಿ ಬಲ್ಬುಗಳುಿನ್ನಿತರೆ ವಸ್ತುಗಳನ್ನು ಬಳಸಿ ಈ ರೋಬೋಟ್ ತಯಾರಿಸಲಾಗಿದೆ. ರೋಬೋಟ್ ನ ತೋಳುಗಳ ಚಾಲನೆಗಾಗಿ ಹೈಡ್ರಾಲಿಕ್ ವ್ಯವಸ್ಥೆಯುಳ್ಳ ನಾಲ್ಕು ಕೊಳವೆಗಳನ್ನು ಬಳಸಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com