ನವದೆಹಲಿ: ಚಂದ್ರಯಾನ-II ಏಪ್ರಿಲ್ ತಿಂಗಳಲ್ಲಿ ಉಡಾವಣೆಯಾಗಲಿದ್ದು, ಚಂದ್ರನಲ್ಲಿ ರೋವರ್ ಇಳಿಯುವ ಪ್ರದೇಶವನ್ನೂ ಗುರುತಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥರಾದ ಡಾ.ಕೆ ಶಿವನ್ ಹೇಳಿದ್ದಾರೆ.
ಚಂದ್ರಯಾನ-II ನೌಕೆಯನ್ನು ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದ್ದು, ಚಂದ್ರನಲ್ಲಿ ನೌಕೆ ಇಳಿಯುವುದಕ್ಕೆ ಎರಡು ಪ್ರದೇಶಗಳನ್ನು ಗುರುತಿಸಲಾಗಿದ್ದು ಯಾವುದೇ ಬೇರೆ ನೌಕೆ ಇಳಿಯದಂತಹ ಒಂದು ಜಾಗವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಶಿವನ್ ತಿಳಿಸಿದ್ದಾರೆ.
ಎರಡನೇ ಚಂದ್ರಯಾನಕ್ಕೆ ಬಳಕೆ ಮಾಡಲಾಗುವ ನೌಕೆ 3,290 ಕೆಜಿಯಷ್ಟಿದೆ.
ಭೂಮಿಯ ಲೆಕ್ಕದಲ್ಲಿ 14 ದಿನಗಳು ಕಳೆಯುವಷ್ಟು ಸಾಮರ್ಥ್ಯವನ್ನು ಹೊಂದಿದ್ದು, 150-200 ಕಿಮೀ ನಷ್ಟು ಸಂಚರಿಸಲಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.