ತಾಜ್‌ಮಹಲ್
ತಾಜ್‌ಮಹಲ್

ಐತಿಹಾಸಿಕ ಸ್ಮಾರಕ ತಾಜ್‌ಮಹಲ್ ಶೀಘ್ರದಲ್ಲೇ ತೇಜ್ ಮಂದಿರ್ ಆಗಿ ಮಾರ್ಪಾಡು: ವಿನಯ್ ಕಟಿಯಾರ್

ವಿಶ್ವ ಪ್ರಸಿದ್ಧ ಐತಿಹಾಸಿಕ ಸ್ಮಾರಕ ತಾಜ್‌ಮಹಲ್ ಅನ್ನು ಶೀಘ್ರದಲ್ಲೇ ತೇಜ್ ಮಂದಿರ್ ಆಗಿ ಮಾರ್ಪಾಡಿಸಲಾಗುವುದು ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿದ್ದಾರೆ...
Published on
ನವದೆಹಲಿ: ವಿಶ್ವ ಪ್ರಸಿದ್ಧ ಐತಿಹಾಸಿಕ ಸ್ಮಾರಕ ತಾಜ್‌ಮಹಲ್ ಅನ್ನು ಶೀಘ್ರದಲ್ಲೇ ತೇಜ್ ಮಂದಿರ್ ಆಗಿ ಮಾರ್ಪಾಡಿಸಲಾಗುವುದು ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿದ್ದಾರೆ. 
ಆಗ್ರಾದಲ್ಲಿ ತಾಜ್ ಮಹೋತ್ಸವವನ್ನು ನಡೆಸಲಾಗುತ್ತದೆಯೇ ಕೇಳಿದಾಗ ಅದಕ್ಕೆ ಉತ್ತರಿಸಿದ ವಿನಯ್ ಕಟಿಯಾರ್ ಅವರು ತಾಜ್ ಮಹೋತ್ಸವ ಅಥವಾ ತೇಜ್ ಮಹೋತ್ಸವ ಹೇಗೆ ಬೇಕಾದರು ಕರೆಯಿರಿ ಎರಡು ಒಂದೇ. ತಾಜ್ ಮತ್ತು ತೇಜ್ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ತೇಜ್ ಮಂದಿರವನ್ನು ಔರಂಗಜೇಬ್ ಸಮಾಧಿ ಸ್ಥಳವನ್ನಾಗಿ ಮಾರ್ಪಡಿಸಿದ. ಇದೀಗ ನಾವು ತಾಜ್ ಮಹಲ್ ಅನ್ನು ತೇಜ್ ಮಂದಿರವಾಗಿ ಮಾರ್ಪಡಿಸುತ್ತೇವೆ ಎಂದು ಹೇಳಿದರು. 
ಇದೇ ವೇಳೆ ಮಹೋತ್ಸವ ಆಯೋಜಿಸುತ್ತಿರುವುದು ಒಳ್ಳೆಯ ಕೆಲಸ. ಆದರೆ ಈ ತಾಜ್ ಮಹಲ್ ಔರಂಗಜೇಬನ ಕಾಲದಲ್ಲಿ ಅಸ್ತಿತ್ವದಲ್ಲಿರಲ್ಲಿಲ್ಲ. ಅದು ನಮ್ಮ ದೇವಾಲಯವಾಗಿತ್ತು ಎಂದು ಹೇಳಿದ್ದಾರೆ.
ಈ ಹಿಂದೆ ವಿಜಯ್ ಕಟಿಯಾರ್ ಅವರು ತಾಜ್ ಮಹಲ್ ಮೂಲತಃ ಶಿವ ದೇವಾಲಯವಾಗಿತ್ತು ಎಂದು ಹೇಳಿದ್ದರು. ಶಿವ ದೇವಾಲಯದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿತ್ತು. ನಂತರ ಲಿಂಗವನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಮೊಘಲ್ ಭವ್ಯ ಸಮಾಧಿಯು ಹಿಂದೂ ದೇವಸ್ಥಾನ ಎಂದು ತೋರಿಸಲು ಹಲವು ಚಿಹ್ನೆಗಳು ಇವೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com