
ಜಮ್ಮು -ಕಾಶ್ಮೀರ : ಪಾಕಿಸ್ತಾನ ಮಾತ್ರ ಗುಂಡಿನ ದಾಳಿ ಮಾಡುತ್ತಿದೆಯೇ?ಭಾರತವೂ ಮಾಡುತ್ತಿದೆ .ಕದನ ವಿರಾಮ ಉಲ್ಲಂಘನೆ ವಿವಾದವನ್ನು ಉಭಯ ರಾಷ್ಟ್ರಗಳು ಬಗೆಹರಿಸಿಕೊಳ್ಳುವಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಪಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಪಾಕಿಸ್ತಾನ ಒಂದರಿಂದಲೇ ಮಾತ್ರ ಗುಂಡಿನ ದಾಳಿ ನಡೆಯುತ್ತಿಲ್ಲ.ಭಾರತದಿಂದಲೂ ದಾಳಿ ನಡೆಯುತ್ತಿದೆ. ಉಭಯ ರಾಷ್ಟ್ರಗಳು ಗುಂಡಿನ ದಾಳಿಯಿಂದ ಜನರು ನಾಶವಾಗುತ್ತಿದ್ದಾರೆ.ಗಡಿಪ್ರದೇಶಗಳಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ,ಆದರೆ, ಯುದ್ಧದಿಂದ ಯಾವುದೇ ಸಮಸ್ಯೆ ಬಗೆಹರಿಯಲ್ಲಾ, ಮಾತುಕತೆಯೊಂದೆ ಸಮಸ್ಯೆಗೆ ಪರಿಹಾರ ಎಂದಿದ್ದಾರೆ.
ಪಾಕಿಸ್ತಾನದ ಶೆಲ್ ದಾಳಿಯಿಂದ ನಾಲ್ವರು ಭಾರತೀಯ ಸೈನಿಕರು ಮೃತಪಟ್ಟ ಮರುದಿನವೇ ಪಾರೂಖ್ ಅಬ್ದುಲ್ಲಾ ಈ ರೀತಿಯ ಹೇಳಿಕೆ ನೀಡಿದ್ದಾರೆ. ರಜೋರಿ ಹಾಗೂ ಪೊಂಚ್ ಜಿಲ್ಲೆಯಲ್ಲಿ ನಿನ್ನೆ ನಡೆದ ಪಾಕಿಸ್ತಾನದ ಶೆಲ್ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು.
Advertisement