ಆಧಾರ್ ಕಾರ್ಡ್ ನ್ನು ಲ್ಯಾಮಿನೇಟ್ ಮಾಡಿಸಬೇಡಿ: ಯುಐಡಿಎಐ ಎಚ್ಚರಿಕೆ!

ಆಧಾರ್ ಕಾರ್ಡ್ ನ್ನು ಲ್ಯಾಮಿನೇಟ್ ಅಥವಾ ಪ್ಲ್ಯಾಸ್ಟಿಕ್ ನಲ್ಲಿ ಬಳಕೆ ಮಾಡಬಾರದು ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಎಚ್ಚರಿಕೆ ನೀಡಿದೆ.
ಆಧಾರ್ ಕಾರ್ಡ್
ಆಧಾರ್ ಕಾರ್ಡ್
ನವದೆಹಲಿ: ಆಧಾರ್ ಕಾರ್ಡ್ ನ್ನು ಲ್ಯಾಮಿನೇಟ್ ಅಥವಾ ಪ್ಲ್ಯಾಸ್ಟಿಕ್ ನಲ್ಲಿ ಬಳಕೆ ಮಾಡಬಾರದು ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಎಚ್ಚರಿಕೆ ನೀಡಿದೆ. 
ಲ್ಯಾಮಿನೇಟ್ ಮಾಡಿಸಿದಲ್ಲಿ ಅಥವಾ ಪ್ಲ್ಯಾಸ್ಟಿಕ್ ಆಧಾರ್ ಸ್ಮಾರ್ಟ್ ಕಾರ್ಡ್ ಗಳನ್ನು ಮಾಡಿಸಿದಲ್ಲಿ ಕ್ಯೂಆರ್ ಕೋಡ್ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ ಅಥವಾ ಖಾಸಗಿ ವಿವರಗಳು ಬಹಿರಂಗಗೊಳ್ಳುವ ಸಾಧ್ಯತೆ ಇದೆ ಎಂದು ಯುಐಡಿಎಐ ಹೇಳಿದೆ. 
ಆಧಾರ್ ಕಾರ್ಡ್ ನ ಕಟ್ ವೇ ಭಾಗ, ಅಥವಾ ಡೌನ್ ಲೋಡೆಡ್ ಆವೃತ್ತಿ, ಎಂ ಆಧಾರ್, ಅಥವಾ ಸಾಮಾನ್ಯ ಪೇಪರ್ ಆವೃತ್ತಿಯ ಆಧಾರ್ ಬಳಸುವುದು ಸೂಕ್ತ. ಅನಧಿಕೃತ ಆಧಾರ್ ಸ್ಮಾರ್ಡ್ ಕಾರ್ಡ್ ಗಳಿಗೆ 5-300 ರೂಪಾಯಿ ಖರ್ಚಾಗುತ್ತದೆ, ಇದು ಅನವಶ್ಯಕ ಖರ್ಚು ಎಂದು ಯುಐಡಿಎಐ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com