ಭಾರತೀಯ ರಾಜಕುಮಾರಿಗೆ ಇಂಗ್ಲೆಂಡಿನ ರಾಯಲ್ ಮೇಲ್ ಅಂಚೆಚೀಟಿ ಗೌರವ

ಭಾರತೀಯ ರಾಣಿ ಸೋಫಿಯಾ ಅಲೆಗ್ಸಾಂಡ್ರಾ ದುಲೀಪ್ ಸಿಂಗ್ (ಆಗಸ್ಟ್ 8 1876-ಆಗಸ್ಟ್ 22 1948) ಚಿತ್ರವಿರುವ ವಿಶೇಷ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವ ಮೂಲಕ ಬ್ರಿಟನ್ ನ ರಾಯಲ್ ಮೇಲ್ ...
ಭಾರತೀಯ ರಾಜಕುಮಾರಿಗೆ ಇಂಗ್ಲೆಂಡಿನ ರಾಯಲ್ ಮೇಲ್ ಅಂಚೆಚೀಟಿ ಗೌರವ
ಭಾರತೀಯ ರಾಜಕುಮಾರಿಗೆ ಇಂಗ್ಲೆಂಡಿನ ರಾಯಲ್ ಮೇಲ್ ಅಂಚೆಚೀಟಿ ಗೌರವ
Updated on
ನವದೆಹಲಿ: ಭಾರತೀಯ ರಾಣಿ ಸೋಫಿಯಾ ಅಲೆಗ್ಸಾಂಡ್ರಾ ದುಲೀಪ್ ಸಿಂಗ್ (ಆಗಸ್ಟ್ 8 1876-ಆಗಸ್ಟ್ 22 1948) ಚಿತ್ರವಿರುವ ವಿಶೇಷ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವ ಮೂಲಕ ಬ್ರಿಟನ್ ನ ರಾಯಲ್ ಮೇಲ್ ಗೌರವ  ಸಲ್ಲಿಸಿದೆ.
19 ನೇ ಶತಮಾನದ ಅಂತ್ಯ ಮತ್ತು 20 ನೇ ಶತಮಾನದ ಆರಂಭದಲ್ಲಿ ಮಹಿಳಾ ಸಂಘಟನೆಗಳ ಸದಸ್ಯರಾಗಿದ್ದ ಸಫ್ರಾಗೆಟ್ಗಳು ಮಹಿಳೆಯರ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಮಹಾರಾಜ ದುಲೀಪ್ ಸಿಂಗ್ ಪುತ್ರಿಯಾದ ಸೋಫಿಯಾ ಸಹ ಪಾಲ್ಗೊಂಡಿದ್ದು ಇದೀಗ ವಿಶೇಷ ಅಂಚೆಚೀಟಿ ಗೌರವಕ್ಕೆ ಭಾಜನರಾಗಿದ್ದಾರೆ.
ಈ ಅಂಚೆಚೀಟಿಯು ರಾಜಕುಮಾರಿ ಸೋಫಿಯಾ ಏಪ್ರಿಲ್ 1913 ರಲ್ಲಿ ಡಬ್ಲ್ಯು ಎಸ್ ಪಿಯು ವೃತ್ತಪತ್ರಿಕೆಯನ್ನು ಮಾರಾಟ ಮಾಡುತ್ತಿರುವ ಚಿತ್ರವನ್ನು ಹೊಂದಿದೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಬ್ರಿಟನ್ ನಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಟ ನಡೆಸಿದ ದಕ್ಷಿಣ ಏಷ್ಯಾದ ಮಹಿಳೆಯರಲ್ಲಿ ರಾಜಕುಮಾರಿಯ ಸೋಫಿಯಾ ಸಹ ಒಬ್ಬರು. ಮಹಿಳಾ ತೆರಿಗೆ ವಿರೋಧಿ ಲೀಗ್ ನಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಮಹಿಳಾ ಸಮಾಜ ಮತ್ತು ರಾಜಕೀಯ ಒಕ್ಕೂಟ ಸೇರಿದಂತೆ ಇತರ ಮಹಿಳಾ ಹೋರಾಟ ಸಮೂಹದಲ್ಲಿ ಸೋಫಿಯಾ ಭಾಗವಹಿಸಿದರು.
ಆದಾಗ್ಯೂ, ಬಿಬಿಸಿ ಪತ್ರಕರ್ತೆ ಅನಿತಾ ಆನಂದ್ 'ಏಷ್ಯಾದ ಮಹಿಳೆ" ಹೆಸರಿನ ವರದಿಯಲ್ಲಿ ಸೋಫಿಯಾ ಜೀವನವನ್ನು ವಿವರಿಸುವವರೆಗೆ ಜಗತ್ತಿನ ಬಹುತೇಕರಿಗೆ ರಾಜಕುಮಾರಿಯ ನೇನಪೇ ಇರಲಿಲ್ಲ. 
ಬ್ರಿಟೀಷ್ ಆಡಳಿತದಲ್ಲಿ ಭಾರತದ ಗವರ್ನರ್ ಆಗಿದ್ದಡಾಲ್ ಹೌಸಿವಧಿಯಲ್ಲಿ ಮಹಾರಾಜ ಪಂಜಾಬಿನ ದುಲೀಪ್ ಸಿಂಗ್ ಸಂಸ್ಥಾನವು ಬ್ರಿಟೀಷರ ಕೈವಶವಾಗಿತ್ತು. ಆಗ ರಾಜಪರಿವಾರ ಇಂಗ್ಲೆಂಡಿನಲ್ಲಿ ಆಶ್ರಯ ಪಡೆಯಿತು. ರಾಜಕುಮಾರಿ ಸೋಫಿಯಾ ತನ್ನ ತಾಯಿ ರಾಣಿ ಬಿಂಬ ಮುಲ್ಲರ್ ಅವರೊಡನೆ ವಾಸವಿದ್ದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com