ಮಲಯಾಳಂ ನಟಿ ಅಪಹರಣ ಕೇಸು: ನಟ ದಿಲೀಪ್ ಗೆ ವಿಡಿಯೊ ಪ್ರತಿ ಕೊಡಲು ಕೋರ್ಟ್ ನಕಾರ

ಕಳೆದ ವರ್ಷ ಮಲಯಾಳಂ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಡಿಯೊದ ನಕಲು ....
ನಟ ದಿಲೀಪ್
ನಟ ದಿಲೀಪ್
Updated on
ಕೊಚ್ಚಿ: ಕಳೆದ ವರ್ಷ ಮಲಯಾಳಂ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಡಿಯೊದ ನಕಲು ಪ್ರತಿಯೊಂದನ್ನು ನೀಡಬೇಕೆಂದು ನಟ ದಿಲೀಪ್ ಕುಮಾರ್ ಸಲ್ಲಿಸಿದ್ದ ಬೇಡಿಕೆಯನ್ನು ಕೇರಳ ಕೋರ್ಟ್ ನಿರಾಕರಿಸಿದೆ. ನಟ ದಿಲೀಪ್ ಈ ಕೇಸಿನಲ್ಲಿ ಸಹ ಆರೋಪಿಯಾಗಿದ್ದಾರೆ.
ಕಳೆದ ವರ್ಷ ಕೊಚ್ಚಿ ಸಮೀಪ ನಟಿಯನ್ನು ಕಾರಿನಲ್ಲಿ ಕರೆದೊಯ್ದು ಸುಮಾರು ಎರಡು ಗಂಟೆಗಳ ಕಾಲ ಸುತ್ತಾಡಿಸಿ ಲೈಂಗಿಕ ಕಿರುಕುಳ ನೀಡಿ ರಾತ್ರಿ ವೇಳೆ ಜನಪ್ರಿಯ ನಿರ್ದೇಶಕರೊಬ್ಬರ ಮನೆಯ ಹತ್ತಿರ ಕಾರಿನಿಂದ ತಳ್ಳಿ ಆರೋಪಿಗಳು ಪರಾರಿಯಾಗಿದ್ದರು.
ವಿಡಿಯೊದ ಪ್ರತಿ ನೀಡಿದರೆ ಅದನ್ನು ದುರುಪಯೋಗಪಡಿಸುವ ಮತ್ತು ನಟಿಯ ಖಾಸಗಿತನಕ್ಕೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಅಂಗಮಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಡಿಯೊ ಪ್ರತಿಯನ್ನು ನೀಡಲು ನಿರಾಕರಿಸಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ನಟಿ ಕೊಚ್ಚಿಯಲ್ಲಿ ತನ್ನ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಪಹರಿಸಲಾಗಿತ್ತು. ಪ್ರಕರಣದ ಮುಖ್ಯ ಆರೋಪಿ ಪಲ್ಸರ್ ಸುನಿಯಾಗಿದ್ದಾನೆ.
ಮಲಯಾಳಂನ ಖ್ಯಾತ ನಟ ದಿಲೀಪ್ ಸೇರಿದಂತೆ 12 ವ್ಯಕ್ತಿಗಳ ವಿರುದ್ಧ ಕಳೆದ ಡಿಸೆಂಬರ್ ನಲ್ಲಿ ತ್ವರಿತ ನ್ಯಾಯಾಲಯ ಆರೋಪಪಟ್ಟಿ ಸ್ವೀಕರಿಸಿತ್ತು. ಇದರಲ್ಲಿ ದಿಲೀಪ್ ಅವರ ಮಾಜಿ ಪತ್ನಿ ಮಂಜು ವಾರಿಯರ್ ಪ್ರಮುಖ ಸಾಕ್ಷಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷ ಜುಲೈ 10ರಂದು ಬಂಧಿಸಲ್ಪಟ್ಟಿದ್ದ ದಿಲೀಪ್ 85 ದಿನಗಳ ಜೈಲುವಾಸದ ನಂತರ ಷರತ್ತುಬದ್ಧ ಜಾಮೀನು ಪಡೆದಿದ್ದರು.
ವಿಚಾರಣೆ ಸಂದರ್ಭದಲ್ಲಿ ನಟಿಗೆ ಕಾರಿನಲ್ಲಿ ನೀಡಲಾಗಿದ್ದ ಲೈಂಗಿಕ ಕಿರುಕುಳ ವಿಡಿಯೊವನ್ನು ನೋಡಲು ದಿಲೀಪ್ ಮತ್ತು ಅವರ ಪರ ವಕೀಲರಿಗೆ ಅವಕಾಶ ನೀಡಲಾಗಿತ್ತು. 
ವಿಡಿಯೊದ ನಿಖರತೆ ಬಗ್ಗೆ ಸಂಶಯವಿರುವುದರಿಂದ ತಿರುಚಿರುವ ಸಾಧ್ಯತೆಯಿರುವುದರಿಂದ ಅದರ ಪ್ರತಿಯೊಂದನ್ನು ತಮಗೆ ನೀಡಬೇಕೆಂದು ದಿಲೀಪ್ ನ್ಯಾಯಾಲಯಕ್ಕೆ ಕೋರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com