ಮಣಿಕರ್ಣಿಕಾ ಚಿತ್ರದ ವಿರುದ್ಧದ ಪ್ರತಿಭಟನೆಗೆ ಕೈ ಜೋಡಿಸಿದ ಕರಣಿ ಸೇನಾ!

ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ಆರೋಪಕ್ಕೆ ಪದ್ಮಾವತ್ ಚಿತ್ರವನ್ನು ವಿರೋಧಿಸಿದ್ದ ಕರಣಿ ಸೇನಾ ಧ್ವನಿಗೂಡಿಸಿದೆ.
ಮಣಿಕರ್ಣೀಕಾ
ಮಣಿಕರ್ಣೀಕಾ
ಜೈಪುರ: ಝಾನ್ಸಿ ರಾಣಿ ಲಕ್ಷ್ಮಿಬಾಯಿ ಜೀವನ ಆಧಾರಿತ, ಕಂಗನಾ ರಣೌತ್ ​ಅಭಿನಯದ ಐತಿಹಾಸಿಕ ಚಿತ್ರ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ'ಯಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ಆರೋಪಿಸಿರುವ ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ಆರೋಪಕ್ಕೆ ಪದ್ಮಾವತ್ ಚಿತ್ರವನ್ನು ವಿರೋಧಿಸಿದ್ದ ಕರಣಿ ಸೇನಾ ಧ್ವನಿಗೂಡಿಸಿದೆ. 
ಮಣಿಕರ್ಣೀಕಾ ಚಿತ್ರವನ್ನು ವಿರೋಧಿಸುತ್ತಿರುವ ಸರ್ವ್ ಬ್ರಾಹ್ಮಣ ಮಹಾಸಭೆಯ ಪ್ರತಿಭಟನೆಯನ್ನು ಬೆಂಬಲಿಸಲು ಕರಣಿ ಸೇನಾ ನಿರ್ಧರಿಸಿದ್ದು, ಚಿತ್ರದಲ್ಲಿ ಬ್ರಿಟೀಷ್ ಅಧಿಕಾರಿ ಹಾಗೂ ಝಾನ್ಸಿ ರಾಣಿಯ ನಂಟನ್ನು ತೋರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. 
ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾದರೆ ರಜಪೂತರು ಸುಮ್ಮನಿರುವುದಿಲ್ಲ ಎಂದು ಕರಣಿ ಸೇನಾ ಎಚ್ಚರಿಕೆ ನೀಡಿದ್ದು, ಮಣಿಕರ್ಣಿಕಾ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಲು ಕರಣಿ ಸೇನಾ ತೀರ್ಮಾನಿಸಿದೆ ಎಂದು ಸಂಸ್ಥಾಪಕ ಲೋಕೇಂದ್ರ ಸಿಂಗ್ ಕಲ್ವಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com