ಸತ್ತು 30 ವರ್ಷ ನಂತರ ಕವಯಿತ್ರಿ, ಮಹಿಳಾ ಕಾರ್ಯಕರ್ತೆ ಹೆಸರಿಗೆ ಟ್ಯಾಕ್ಸ್ ನೋಟಿಸ್!

ಮೃತ ಕವಯಿತ್ರಿ, ಮಹಿಳಾ ಕಾರ್ಯಕರ್ತೆ ಮಹದೇವಿ ವರ್ಮಾ ಅವರಿಗೆ ಟ್ಯಾಕ್ಸ್ ನೋಟಿಸ್ ಕಳುಹಿಸವ ಮೂಲಕ ಅಲಹಾಬಾದ್ ಮುನಿಸಿಪಲ್ ಕಾರ್ಪೋರೇಷನ್(ಎಎಂಸಿ) ಎಡವಟ್ಟು ಮಾಡಿದೆ.
ತೆರಿಗೆ ನೋಟಿಸ್
ತೆರಿಗೆ ನೋಟಿಸ್
ಅಲಹಾಬಾದ್: ಮೃತ ಕವಯಿತ್ರಿ, ಮಹಿಳಾ ಕಾರ್ಯಕರ್ತೆ ಮಹದೇವಿ ವರ್ಮಾ ಅವರಿಗೆ ಟ್ಯಾಕ್ಸ್ ನೋಟಿಸ್ ಕಳುಹಿಸವ ಮೂಲಕ ಅಲಹಾಬಾದ್ ಮುನಿಸಿಪಲ್ ಕಾರ್ಪೋರೇಷನ್(ಎಎಂಸಿ) ಎಡವಟ್ಟು ಮಾಡಿದೆ. 
ಮಹಾದೇವಿ ವರ್ಮಾ ಅವರು ಕಳೆದ 30 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಆದರೆ ನಾಗರಿಕ ಸಂಸ್ಥೆ ಮಹಾದೇವಿ ಅವರನ್ನು ಹಾಜರುಪಡಿಸುವಂತೆ ಮತ್ತು ಉಳಿಕೆ ಬಾಕಿ ತೆರಿಗೆ ಹಣ 44,816 ರುಪಾಯಿ ಪಾವತಿಸುವಂತೆ ನೋಟೀಸ್ ನೀಡಿದೆ. 
ಮಹಾದೇವಿ ವರ್ಮಾ ಅವರು ಬಾಕಿ ಉಳಿಕೆ ತೆರಿಗೆ ಹಣ ಪಾವತಿಸಲು ವಿಫಲರಾದರೆ, ಅವರು ವಾಸವಿದ್ದ ಅಶೋಕ್ ನಗರದ ನೆವಾಡದಲ್ಲಿರುವ ಮನೆಯನ್ನು ಜಪ್ತಿ ಮಾಡುವುದಾಗಿ ನೋಟಿಸ್ ನಲ್ಲಿ ತಿಳಿಸಲಾಗಿದೆ. 
ನೆವಾಡದಲ್ಲಿರುವ ಮನೆ ಹೀಗಲು ಮಹಾದೇವಿ ವರ್ಮಾ ಅವರ ಹೆಸರಿನಲ್ಲಿದ್ದು ಹಲವು ವರ್ಷಗಳಿಂದ ತೆರಿಗೆ ಹಣ ಪಾವತಿಸಿಲ್ಲ. ಇದನ್ನು ಮನೆ ತೆರಿಗೆಯನ್ನು ತಪ್ಪಿಸಿಕೊಳ್ಳುವುದು ಎಂದು ಪರಿಗಣಿಸಲಾಗಿದೆ ಎಂದು ಮುಖ್ಯ ತೆರಿಗೆ ಅಧಿಕಾರಿ ಪಿಕೆ ಮಿಶ್ರಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com