ನರೇಂದ್ರ ಮೋದಿ
ನರೇಂದ್ರ ಮೋದಿ

ಮಂತ್ರವಾದಿಯ ಕರಾಳ ಯುಗ ಶೀಘ್ರ ಅಂತ್ಯ: ಮಾಣಿಕ್‌ ಸರ್ಕಾರ್ ವಿರುದ್ಧ ಮೋದಿ ವಾಗ್ದಾಳಿ

ತ್ರಿಪುರ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ಮಾಣಿಕ್ ಸರ್ಕಾರ....
ಅಗರ್ತಲಾ: ತ್ರಿಪುರ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ಮಾಣಿಕ್ ಸರ್ಕಾರ ಒಬ್ಬ ಮಂತ್ರವಾದಿ. ಶೀಘ್ರದಲ್ಲೇ ಆತನ ಕರಾಳ ಯುಗ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ.
ಫೆಬ್ರವರಿ 18ರಂದು ತ್ರಿಪುರ ವಿಧಾನಸಭೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಇಂದು ಅಗರ್ತಲಾದಲ್ಲಿ ಬಿಜೆಪಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಾಣಿಕ್‌ ಸರ್ಕಾರ ಅವರ ಸರ್ಕಾರವನ್ನು "ಹೀರಾ'' ಸರ್ಕಾರ್‌ ಬದಲಿಸಲಿದೆ. ಹೀರಾ ಎಂದರೆ ಹೈವೇ, ಐ-ವೇ (ಡಿಜಿಟಲ್‌ ಕನೆಕ್ಟಿವಿಟಿ) , ರೋಡ್‌ ವೇ ಮತ್ತು ಏರ್‌ ವೇ - ಎಂದು ಹೇಳಿದರು. 
ಇಲ್ಲಿ ಅಜ್ಞಾತ ಮಂತ್ರವಾದಿಯ ಸರ್ಕಾರವಿದ್ದು, ಈಗ ಅದಕ್ಕೆ ಕೊನೆಗಾಲ ಬಂದಿದೆ. ಇನ್ನು ಮುಂದೆ ತ್ರಿಪುರದಲ್ಲಿ ಅಭಿವೃದ್ಧಿಯ ಮಹಾಪರ್ವ ಆರಂಭವಾಗಲಿದೆ ಎಂದು ಪ್ರಧಾನಿ ಹೇಳಿದರು.
ಮಾಣಿಕ್‌ ಸರ್ಕಾರ್‌ ನೇತೃತ್ವದ ಸಿಪಿಐ ಆಡಳಿತೆಯಲ್ಲಿ ಜನರು ಕನಿಷ್ಠ ವೇತನವನ್ನು ಪಡೆಯುತ್ತಿಲ್ಲ. ಈ ಸರ್ಕಾರ ಜನರನ್ನು ವಂಚಿಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು. ಅಲ್ಲದೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂ ನಂತರ ಈಶಾನ್ಯ ಭಾರತದ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com