ಡಿಎಲ್ ಪಡೆಯಲು ವಿಳಾಸ ಮತ್ತು ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ನೀಡಬಹುದು: ಸರ್ಕಾರ

ಕೇಂದ್ರ ಸರ್ಕಾರ ಚಾಲನಾ ಪರವಾನಗಿ(ಡಿಎಲ್) ಪಡೆಯುವ ನಿಯಮಕ್ಕೆ ತಿದ್ದುಪಡಿ ಮಾಡಿದ್ದು, ಡಿಎಲ್ ಪಡೆಯಲು ವಿಳಾಸ ಮತ್ತು ವಯಸ್ಸಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ ಚಾಲನಾ ಪರವಾನಗಿ(ಡಿಎಲ್) ಪಡೆಯುವ ನಿಯಮಕ್ಕೆ ತಿದ್ದುಪಡಿ ಮಾಡಿದ್ದು, ಡಿಎಲ್ ಪಡೆಯಲು ವಿಳಾಸ ಮತ್ತು ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಸಲ್ಲಿಸಬಹುದು ಎಂದು ಶುಕ್ರವಾರ ಸ್ಪಷ್ಟಪಡಿಸಿದೆ.
ಈ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ತಿದ್ದುಪಡಿ ತರಲಾಗಿದ್ದು, ಕಾನೂನಿನ ಮಾನ್ಯತೆಗಾಗಿ ಅದನ್ನು ಕಾನೂನು ಸಚಿವಾಲಯಕ್ಕೆ ಸಲ್ಲಿಸಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಡಿಎಲ್ ಪಡೆಯಲು ಅರ್ಜಿಯ ಜೊತೆ ಸಲ್ಲಿಸುವ ವಿಳಾಸ ಮತ್ತು ವಯಸ್ಸಿನ ದಾಖಲೆಗಳ ಪೈಕಿ ಆಧಾರ್ ಸಹ ಸೇರಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಇಂದು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಒಂದು ವೇಳೆ ಅರ್ಜಿದಾರ ಆಧಾರ್ ಕಾರ್ಡ್ ಹೊಂದಿರದಿದ್ದರೆ ಡಿಎಲ್ ಪಡೆಯಲು ಪಾಸ್ ಪೋರ್ಟ್, ಜನನ ಪ್ರಮಾಣ ಪತ್ರದಂತ ಇತರೆ ದಾಖಲೆಳನ್ನು ಸಲ್ಲಿಸಲು ಅವಕಾಶವಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com