ಕೇಜ್ರಿವಾಲ್ ವಿರುದ್ಧದ ಮಾನನಷ್ಟ ಮೊಕದ್ದಮೆ: ಏಕಸದಸ್ಯ ಪೀಠದಿಂದ ಜೇಟ್ಲಿಯ ಪಾಟಿಸವಾಲು-ದೆಹಲಿ ಕೋರ್ಟ್

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಅರುಣ್ ಜೇಟ್ಲಿ ಅವರ ಪಾಟಿಸವಾಲನ್ನು ಜಂಟಿ ರಿಜಿಸ್ಟಾರ್ ನಿಂದ ಏಕಸದಸ್ಯ
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Updated on: 
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಅರುಣ್ ಜೇಟ್ಲಿ ಅವರ ಪಾಟಿಸವಾಲನ್ನು ಜಂಟಿ ರಿಜಿಸ್ಟಾರ್ ನಿಂದ ಏಕಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. 
ನ್ಯಾ.ಮನಮೋಹನ್ ಈ ಬಗ್ಗೆ ಆದೇಶ ಹೊರಡಿಸಿದ್ದು, ಹಣಾಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಏಕಸದಸ್ಯ ಪೀಠದೆದುರು ಪಾಟಿಸವಾಲಿಗೆ ಒಳಪಡಬೇಕು, ಜಂಟಿ ರಿಜಿಸ್ಟಾರ್ ಎದುರಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಫೆ.12 ರೊಳಗೆ ಜೇಟ್ಲಿ ಪಾಟಿಸವಾಲನ್ನು ಪೂರ್ಣಗೊಳಿಸುವಂತೆ ಕೇಜ್ರಿವಾಲ್ ಪರ ವಕೀಲರಿಗೆ ನೀಡಲಾಗಿದ್ದ ಈ ಹಿಂದಿನ ಆದೇಶವೂ ಅನ್ವಯವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. 
ಕೇಂದ್ರ ಸಚಿವರಿಗೆ ಕೇಳಬೇಕಿರುವ ಪ್ರಶ್ನೆಗಳ ಪ್ರಸ್ತುತತೆ, ಪಾಟಿಸವಾಲು ಮುಕ್ತಾಯಗೊಳಿಸಬೇಕಿರುವ ಅವಧಿಯನ್ನೂ ಸಹ ಏಕಸದಸ್ಯ ಪೀಠ ತೀರ್ಮಾನಿಸುತ್ತದೆ ಎಂದು ಹೈಕೋರ್ಟ್ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com