ನೋಟ್ ಬ್ಯಾನ್ : 15 ತಿಂಗಳು ಕಳೆದರೂ ಆರ್ ಬಿಐನಲ್ಲಿ ಮುಂದುವರೆದ ಲೆಕ್ಕ ಪ್ರಕ್ರಿಯೆ

ಕೇಂದ್ರಸರ್ಕಾರ 1 ಸಾವಿರ ಹಾಗೂ 500 ರೂಗಳನ್ನು ಅಮಾನ್ಯೀಕರಣಗೊಳಿಸಿ 15 ತಿಂಗಳೂ ಕಳೆದರೂ ಈ ಹಣದ ನಿಖರತೆ ಹಾಗೂ ಪ್ರಾಮಾಣಿಕತೆ ಪರಿಶೀಲಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ನೋಟ್ ರದ್ದತಿ ಕುರಿತ(ಸಾಂದರ್ಭಿಕ ಚಿತ್ರ)
ನೋಟ್ ರದ್ದತಿ ಕುರಿತ(ಸಾಂದರ್ಭಿಕ ಚಿತ್ರ)

ನವದೆಹಲಿ: ಕೇಂದ್ರಸರ್ಕಾರ 1 ಸಾವಿರ ಹಾಗೂ 500 ರೂಗಳನ್ನು ಅಮಾನ್ಯೀಕರಣಗೊಳಿಸಿ 15 ತಿಂಗಳೂ ಕಳೆದರೂ  ಈ ಹಣದ ನಿಖರತೆ ಹಾಗೂ ಪ್ರಾಮಾಣಿಕತೆ ಪರಿಶೀಲಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ನೋಟ್ ನಿಷೇಧದಿಂದ ಅಪಾರ ಪ್ರಮಾಣದ ಹಣ ಬ್ಯಾಂಕಿಗೆ ಸಂದಾಯವಾಗಿದ್ದು,
ವೇಗವರ್ಧಿತ ರೀತಿಯಲ್ಲಿ ಪರಿಶೀಲನೆ ಪ್ರಕ್ರಿಯೆ ನಡೆದಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಆರ್ ಬಿಐ ಉತ್ತರ ನೀಡಿದೆ.

ಜೂನ್ 30, 2017ರ ವೇಳೆಗೆ ಆರ್ ಬಿಐಗೆ ಸುಮಾರು 15.28 ಲಕ್ಷ ಕೋಟಿ ಹಣ ಸಂದಾಯವಾಗಿದೆ. ಕರೆನ್ಸಿ ಪರಿಶೀಲನೆ ಮೇಷಿನ್ ಮೂಲಕ ಹಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ಆದರೆ, ಮೇಷಿನ್ ಗಳು ಇರುವ ಸ್ಥಳದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ನವೆಂಬರ್ 8,2016ರಂದು  500, ಹಾಗೂ 1 ಸಾವಿರ ರೂ. ನೋಟ್ ಗಳನ್ನು ನಿರ್ಬಂಧಿಸಲಾಗಿತ್ತು. 2016-17ರ ತನ್ನ ವಾರ್ಷಿಕ ವರದಿಯಲ್ಲಿ  15. 28 ಲಕ್ಷ ಕೋಟಿ ರೂಪಾಯಿ ಬ್ಯಾಂಕಿಗೆ ಸಂದಾಯವಾಗಿದೆ ಎಂದು ಬ್ಯಾಂಕ್ ಹೇಳಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com