ಶಾಶ್ವತವಾಗಿ 'ಬಾಬ್ರಿ' ಮಸೀದಿಯಾಗೆ ಉಳಿಯುತ್ತದೆ: ಎಐಎಂಪಿಎಲ್‌ಬಿ

ಶಾಶ್ವತವಾಗಿ 'ಬಾಬ್ರಿ' ಮಸೀದಿಯಾಗೆ ಉಳಿಯುತ್ತದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಹೇಳಿದೆ...
ಬಾಬ್ರಿ ಮಸೀದಿ
ಬಾಬ್ರಿ ಮಸೀದಿ
ನವದೆಹಲಿ: ಶಾಶ್ವತವಾಗಿ 'ಬಾಬ್ರಿ' ಮಸೀದಿಯಾಗೆ ಉಳಿಯುತ್ತದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಹೇಳಿದೆ. 
ನ್ಯಾಯಾಲಯದ ಹೊರಗೆ ಬಾಬ್ರಿ ಮಸೀದಿ-ರಾಮಮಂದಿರ ವಿವಾದ ಇತ್ಯರ್ಥ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ತನ್ನ ಒಪ್ಪಿಗೆ ಇಲ್ಲದೆ ಅಯೋಧ್ಯೆ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮೌಲಾನ ಸಲ್ಮಾನ್ ನದ್ವಿ ಅವರನ್ನು ಎಐಎಂಪಿಎಲ್‌ಬಿ ವಜಾ ಮಾಡಿದೆ. 
ಎಐಎಂಪಿಎಲ್‌ಬಿ ಸದಸ್ಯರಾಗಿರುವ ಸಲ್ಮಾನ್ ನದ್ವಿ ಎರಡು ದಿನಗಳ ಹಿಂದೆ ರವಿಶಂಕರ್ ಗುರೂಜಿಯನ್ನು ಭೇಟಿಯಾಗಿ ಅಯೋಧ್ಯೆ ವಿಚಾರವಾಗಿ ಮಾತುಕತೆ ನಡೆಸಿದ್ದರು. ಹೀಗಾಗಿ ಅವರನ್ನು ಎಐಎಂಪಿಎಲ್‌ಬಿ ವಜಾ ಮಾಡಿದೆ. 
ಇನ್ನು ಅಯೋಧ್ಯೆ ವಿವಾದ ಕುರಿತಂತೆ ನ್ಯಾಯಾಲಯದ ತೀರ್ಮಾನವನ್ನೇ ನೆಚ್ಚಿಕೊಳ್ಳುವ ತನ್ನ ನಿಲುವನ್ನು ಪುನರುಚ್ಚರಿಸಿದ ಮಂಡಳಿ ಸಲ್ಮಾನ್ ನದ್ವಿಯವರು ಮಂಡಳಿಯ ನಿಲುವಿನ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com