11 ಮುಖ್ಯಮಂತ್ರಿಗಳ ವಿರುದ್ಧ ಅಪರಾಧ ಪ್ರಕರಣ; 25 ಸಿಎಂಗಳು ಕೋಟ್ಯಾಧಿಪತಿಗಳು: ವರದಿ

ಹನ್ನೊಂದು ಮುಖ್ಯಮಂತ್ರಿಗಳ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿದ್ದು ಇನ್ನು 25 ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳು ಎಂಬ ಅಂಶ ಬಹಿರಂಗಗೊಂಡಿದೆ...
ಅರವಿಂದ್ ಕೇಜ್ರಿವಾಲ್-ದೇವೇಂದ್ರ ಫಡ್ನಾವಿಸ್-ಪಿಣರಾಯಿ ವಿಜಯನ್
ಅರವಿಂದ್ ಕೇಜ್ರಿವಾಲ್-ದೇವೇಂದ್ರ ಫಡ್ನಾವಿಸ್-ಪಿಣರಾಯಿ ವಿಜಯನ್
ನವದೆಹಲಿ: ಹನ್ನೊಂದು ಮುಖ್ಯಮಂತ್ರಿಗಳ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿದ್ದು ಇನ್ನು 25 ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳು ಎಂಬ ಅಂಶ ಬಹಿರಂಗಗೊಂಡಿದೆ.
22 ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 
ಇನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ 11 ಅಪರಾಧ ಪ್ರಕರಣಗಳು ದಾಖಲಾಗಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು ಮೂರನೇ ಸ್ಥಾನದಲ್ಲಿದ್ದು ಇನ್ನು ಗಂಭೀರ ಅಪರಾಧ ಪ್ರಕರಣಗಳ ಪಟ್ಟಿಗೆ ಬಂದರೆ ನಾಲ್ಕು ಅಪರಾಧ ಪ್ರಕರಣ ಸಂಬಂಧ ಕೇಜ್ರಿವಾಲ್ ಅಗ್ರಸ್ಥಾನದಲ್ಲಿದ್ದಾರೆ.
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಮತ್ತು ರಾಷ್ಟ್ರೀಯ ಚುನಾವಣಾ ಕಣ್ಗಾವಲು ಸಂಸ್ಥೆ (ಎನ್‌ಇಡಬ್ಲ್ಯೂ) ನೂತನ ವರದಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ರಾಜ್ಯ ವಿಧಾನಸಭೆ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 31 ಮುಖ್ಯಮಂತ್ರಿಗಳ ವಿಶ್ಲೇಷಿಸಲ್ಪಟ್ಟಿದ್ದು ಅವರಲ್ಲಿ 11 ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ. 
ಪಟ್ಟಿಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಾರ್ಖಂಡ್ ಮುಖ್ಯಮಂತ್ರಿ ರಘುಬಾರ್ ದಾಸ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ತೆಲಂಗಾಣ ಮುಖ್ಯಮಂತ್ರಿ ಕೆಸಿ ರಾವ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ, ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ. 
ಹನ್ನೊಂದು ಮುಖ್ಯಮಂತ್ರಿಗಳ ಪೈಕಿ ಚಂದ್ರಬಾಬು ನಾಯ್ಡು, ವಿ ನಾರಾಯಣಸ್ವಾಮಿ ಮತ್ತು ಮೆಹಬೂಬಾ ಮುಫ್ತಿ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿಲ್ಲ. 
ಇನ್ನು 31 ಮುಖ್ಯಮಂತ್ರಿಗಳ ಪೈಕಿ 25 ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಚಂದ್ರಬಾಬು ನಾಯ್ಡು ಅವರು 177 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. 129 ಕೋಟಿ ಆಸ್ತಿ ಹೊಂದಿರುವ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಾಂಡು ಎರಡನೇ ಸ್ಥಾನ. 48 ಕೋಟಿ ಆಸ್ತಿ ಹೊಂದಿರುವ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com