ಸಂಜ್ವಾನ್ ಸೇನಾ ಕ್ಯಾಂಪ್, ಕರಣ್ ನಗರ ಉಗ್ರ ದಾಳಿಯ ಹೊಣೆ ಹೊತ್ತ ಎಲ್ ಇಟಿ

ಜಮ್ಮು ಮತ್ತು ಕಾಶ್ಮೀರದ ಸಜ್ವಾನ್ ಸೇನಾ ಕ್ಯಾಂಪ್ ಹಾಗೂ ಕರಣ್ ನಗರದಲ್ಲಿನ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ನಡೆದ ಉಗ್ರ ದಾಳಿಯ ಹೊಣೆಯನ್ನು....
ಎನ್ ಕೌಂಟರ್ ಮುಂದುವರೆಸಿರುವ ಭದ್ರತಾ ಸಿಬ್ಬಂದಿ
ಎನ್ ಕೌಂಟರ್ ಮುಂದುವರೆಸಿರುವ ಭದ್ರತಾ ಸಿಬ್ಬಂದಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಜ್ವಾನ್ ಸೇನಾ ಕ್ಯಾಂಪ್ ಹಾಗೂ ಕರಣ್  ನಗರದಲ್ಲಿನ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ನಡೆದ ಉಗ್ರ ದಾಳಿಯ ಹೊಣೆಯನ್ನು ಲಷ್ಕರ್ ಇ ತೊಯ್ಬಾ(ಎಲ್ ಇಟಿ) ಉಗ್ರ ಸಂಘಟನೆ ಸೋಮವಾರ ಹೊಣೆ ಹೊತ್ತುಕೊಂಡಿದೆ.
ಇಂದು ಬೆಳಗಿನ ಜಾವ ಇಬ್ಬರು ಶಸ್ತ್ರ ಸಜ್ಜಿತ ಉಗ್ರರು ಶ್ರೀನಗರದ ಕರಣ್ ನಗರದಲ್ಲಿರುವ ಸಿಆರ್ ಪಿಎಫ್ ನ 23ನೇ ಬಟಾಲಿಯನ್ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮರಾಗಿದ್ದಾರೆ. ಉಗ್ರರೊಂದಿಗೆ ಎನ್ ಕೌಂಟರ್ ಮುಂದುವರೆದಿದೆ.
ಕಳೆದ ಶನಿವಾರ ಜಮ್ಮುವಿನ ಸಂಜ್ವಾನ್ ಸೇನಾ ಕ್ಯಾಂಪ್ ನಡೆದ ಉಗ್ರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದರು. ಅಲ್ಲದೆ ಆರು ಸೇನಾ ಸಿಬ್ಬಂದಿ ಸೇರಿದಂತೆ 12 ಮಂದಿ ಗಾಯಗೊಂಡಿದ್ದರು.
ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಿದ ನಾಲ್ವರು ಎಲ್ ಇಟಿ ಉಗ್ರರನ್ನು ಸೇನೆ ಹೊಡೆದುರುಳಿಸಿತ್ತು. ಇತರೆ ಉಗ್ರರಿಗಾಗಿ ಈಗಲೂ ಸಂಜ್ವಾನ್ ನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ.
ಸರಣಿ ಉಗ್ರ ದಾಳಿಯ ನಂತರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಭದ್ರತೆಯನ್ನು ಪರಿಶೀಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com