ಚುನಾವಣಾ ಅಖಾಡ: ರಾಜಸ್ಥಾನದ ಬಜೆಟ್ ನಲ್ಲಿ ರೈತರ ಸಾಲ ಮನ್ನಾ, ತೆರಿಗೆ ವಿನಾಯ್ತಿ!

ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ರಾಜಸ್ಥಾನ ರೈತರು ಹಾಗೂ ಮಧ್ಯಮವರ್ಗದ ಜನತೆಯ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ 2018-19 ನೇ ಸಾಲಿನ ಬಜೆಟ್ ನಲ್ಲಿ 8,000 ಕೋಟಿ ರೂಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಲಾಗಿದೆ
ವಸುಂಧರಾ ರಾಜೆ
ವಸುಂಧರಾ ರಾಜೆ
ಜೈಪುರ: ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ರಾಜಸ್ಥಾನ ರೈತರು ಹಾಗೂ ಮಧ್ಯಮವರ್ಗದ ಜನತೆಯ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ 2018-19 ನೇ ಸಾಲಿನ ಬಜೆಟ್ ನಲ್ಲಿ 8,000 ಕೋಟಿ ರೂಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಲಾಗಿದ್ದು 650 ಕೋಟಿ ರೂಪಾಯಿಗಳಷ್ಟು ತೆರಿಗೆ ವಿನಾಯ್ತಿ ಹಾಗೂ ಸಾಮಾಜಿಕ ಹಾಗೂ ಸಮುದಾಯ ಯೋಜನೆಗಳಿಗೆ ಖರ್ಚು ಮಾಡುವುದಕ್ಕಾಗಿ 44,135 ಕೋಟಿ ರೂ ಮೀಸಲಿರಿಸಲಾಗಿದೆ.  
ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ರೈತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದ್ದು, ಎಲ್ಲಾ ವರ್ಗದವರಿಗೂ ಮೂಲಸೌಕರ್ಯ, ವೈದ್ಯಕೀಯ, ಆರೋಗ್ಯ, ಕೈಗಾರಿಕೆ, ಶಿಕ್ಷಣ ಸೌಲಭ್ಯಗಳು ತಲುಪುವ ಉದ್ದೇಶ ಹೊಂದಲಾಗಿದೆ ಎಂದು ಸಿಎಂ ವಸುಂಧರಾ ರಾಜೆ ಹೇಳಿದ್ದಾರೆ. 
ಹಣಕಾಸು ಸಚಿವರೂ ಆಗಿರುವ ವಸುಂಧರಾ ರಾಜೆ, ಒಟ್ಟಾರೆ ವಿವಿಧ ಯೋಜನೆಗಳನ್ನೊಳಗೊಂಡ 1,07,865.40 ಕೋಟಿ ರೂಪಾಯಿಯಷ್ಟು ಬಜೆಟ್ ಮಂಡಿಸಿದ್ದಾರೆ. 
ಸಾಮಾಜಿಕ ಹಾಗೂ ಸಮುದಾಯಗಳಿಗಾಗಿ ಬಜೆಟ್ ನ ಶೇ.40.92 ರಷ್ಟನ್ನು ಮೀಸಲಿರಿಸಲಾಗಿದ್ದು, ಇಂಧನ ಕ್ಷೇತ್ರಕ್ಕೆ ಶೇ.25.08 ರಷ್ಟನ್ನು ಮೀಸಲಿರಿಸಲಾಗಿದ್ದರೆ ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಶೇ.13.42 ರಷ್ಟು ಅನುದಾನ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com