
ನವದೆಹಲಿ: ಸೇನೆಯ ಬಗ್ಗೆ ಆರ್ ಎಸ್ಎಸ್ ಮುಖಂಡ ಮೋಹನ್ ಭಾಗ್ವವತ್ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಸಮರ್ಥಿಸಿಕೊಂಡಿದ್ದು ಕೇಂದ್ರ ಸಚಿವರನ್ನು ಸಂಘಪರಿವಾರದ ಸಚಿವ ಎಂದು ತೃಣಮೂಲ ಕಾಂಗ್ರೆಸ್ ಟೀಕೆ ಮಾಡಿದೆ.
ಭಾಗ್ವವಾತ್ ಹೇಳಿಕೆಯನ್ನು ಖಂಡಿಸಿ ಸೇನೆಯನ್ನು ರಾಜಕೀಯಗೊಳಿಸಬಾರದು ಎಂದಿದ್ದ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಕಿರಣ್ ರಿಜಿಜು, ಭಾರತೀಯ ಸೇನೆ ನಮ್ಮ ಹೆಮ್ಮೆ, ಓರ್ವ ವ್ಯಕ್ತಿಯನ್ನು ಸೇನೆಗೆ ತಯಾರು ಮಾಡಬೇಕಾದರೆ 6-7 ತಿಂಗಳು ಬೇಕಾಗುತ್ತದೆ ಎಂದಷ್ಟೇ ಮೋಹನ್ ಭಾಗ್ವತ್ ಹೇಳಿದ್ದರು. ಸಂವಿಧಾನ ಒಪ್ಪಿಗೆ ಸೂಚಿಸಿದರೆ ಆರ್ ಎಸ್ಎಸ್ ಸೇನೆಗೂ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದೆ, ತುರ್ತು ಪರಿಸ್ಥಿತಿಗಳಲ್ಲಿ ಸೇನೆಗೆ ಸಹಾಯ ಮಾಡುವುದು ಆರ್ ಎಸ್ಎಸ್ ಸಂಘಟನೆಯೇ ಹೊರತು ಕಾಂಗ್ರೆಸ್ ಅಲ್ಲ ಎಂದು ಕಿರಣ್ ರಿಜಿಜು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದರು.
ಮೋಹನ್ ಭಾಗ್ವವತ್ ಅವರನ್ನು ಕಿರಣ್ ರಿಜಿಜು ಸಮರ್ಥಿಸಿಕೊಂಡಿದ್ದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಕಿರಣ್ ರಿಜಿಜು ಗೃಹ ಖಾತೆ ರಾಜ್ಯ ಸಚಿವರಲ್ಲ ಬದಲಾಗಿ ಸಂಘಪರಿವಾರದ ಸಚಿವ ಎಂದು ಜರಿದಿದೆ.
Advertisement