ನವದೆಹಲಿ: 64 ಕೋಟಿ ರೂ. ಮೊತ್ತದ ಬೋಪೋರ್ಸ್ ಹಗರಣ ವಿಚಾರಣೆಯನ್ನು ನಡೆಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದ ಸದಸ್ಯರಾದ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಸ್ವಯಂಪ್ರೇರಣೆಯಿಂದ ಹಿಂದೆ ಸರಿದಿದ್ದಾರೆ.
ತಾವು ಹಗರಣ ಕುರಿತ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಕ್ಕೆ ಕಾರಣವನ್ನು ತಿಳಿಸಲು ಖಾನ್ವಿಲ್ಕರ್ ನಿರಾಕರಿಸಿದ್ದಾರೆ. ಮಾರ್ಚ್ 28ಕ್ಕೆ ಹೊಸತಾಗಿ ರಚನೆಯಾದ ನ್ಯಾಯಪೀಠವು ಬೋಫೋರ್ಸ್ ಹಗರಣ ಸಂಬಂಧ ವಿಚಾರಣೆ ಮುಂದುವರಿಸಲಿದೆ ಎಂದು ಪೀಠದ ಇನ್ನೋರ್ವ ಸದಸ್ಯರಾದ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಹೇಳಿದ್ದಾರೆ.
ಮೇ 31, 2005ರಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬಿಜೆಪಿ ನಾಯಕ ಅಜಯ್ ಅಗರ್ವಾಲ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು ದೆಹಲಿ ಹೈಕೋರ್ಟ್ ಹಗರಣದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಆರೋಪಿಗಳ ವಿರುದ್ಧ ಆರೋಪಗಳನ್ನು ತಳ್ಳಿಹಾಕಿತ್ತು.