ವ್ಯಾಲೆಂಟೈನ್ಸ್ ಡೇ: ಹೈದ್ರಾಬಾದಿನಲ್ಲಿ ವಿದೇಶಿ ಸಂಸ್ಕೃತಿ ಪ್ರೋತ್ಸಾಹಿಸದಂತೆ ಪಬ್ ಗಳಿಗೆ ಭಜರಂಗದಳ ಎಚ್ಚರಿಕೆ

ನಾಳೆ ವ್ಯಾಲೆಂಟೈನ್ಸ್ ಡೇ.ಹೆಣ್ಣು- ಗಂಡು ಪರಸ್ಪರ ಭಾವನೆ ಹಂಚಿಕೊಳ್ಳುವುದಕ್ಕಾಗಿ ಈ ದಿನವನ್ನು ಮೀಸಲಿಟ್ಟಿದ್ದು, ಜಗತ್ತಿನಾದ್ಯಂತಈ ದಿನವನ್ನು ಆಚರಿಸಲಾಗುತ್ತಿದೆ.
ಹೈದ್ರಾಬಾದಿನ ಪಬ್ ವೊಂದಕ್ಕೆ    ನುಗ್ಗಿದ್ದ ಭಜರಂಗದಳದ ಕಾರ್ಯಕರ್ತರ ಚಿತ್ರ
ಹೈದ್ರಾಬಾದಿನ ಪಬ್ ವೊಂದಕ್ಕೆ ನುಗ್ಗಿದ್ದ ಭಜರಂಗದಳದ ಕಾರ್ಯಕರ್ತರ ಚಿತ್ರ

ಹೈದ್ರಾಬಾದ್: ನಾಳೆ ವ್ಯಾಲೆಂಟೈನ್ಸ್ ಡೇ. ಗಂಡು- ಹೆಣ್ಣು ಪರಸ್ಪರ ಭಾವನೆ ಹಂಚಿಕೊಳ್ಳುವುದಕ್ಕಾಗಿ ಈ ದಿನವನ್ನು ಮೀಸಲಿಟ್ಟಿದ್ದು, ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

 ಪ್ರೇಮಿಗಳು ತಮ್ಮ ಪ್ರೇಮನಿವೇದನೆ ಮಾಡುವ ಕಾಲ. ಇದಕ್ಕಾಗಿ ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ವಿವಿಧ ಮಹಾನಗರಗಳ ಪಬ್, ಹೋಟೆಲ್, ರೆಸ್ಟೋರೆಂಟ್ ಗಳು ಗ್ರಾಹಕರನ್ನು ಸೆಳೆಯಲು ಸಜ್ಜುಗೊಂಡಿವೆ.

ಆದರೆ, ಇದು ಭಾರತೀಯ ಸಂಸ್ಕೃತಿಯಲ್ಲ, ವಿದೇಶಿ ಸಂಸ್ಕೃತಿ ಎಂದು ಪರಿಭಾವಿಸಿ ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವಂತಹ ಘಟನೆಗಳು ನಡೆಯುತ್ತಾ ಬಂದಿವೆ.  ಪ್ರೇಮಿಗಳ ದಿನವನ್ನಾಗಿ ಆಚರಣೆಗೆ ಭಜರಂಗದಳ ಮೊದಲಾದ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಹೈದ್ರಾಬಾದಿನ ಪಬ್ ವೊಂದಕ್ಕೆ ನುಗ್ಗಿದ್ದ ಭಜರಂಗದಳದ ಕಾರ್ಯಕರ್ತರು, ನಾಳೆ ಯಾವುದೇ ವಿಶೇಷ ಕಾರ್ಯಕ್ರಮ ಆಯೋಜಿಸದಂತೆ ಎಚ್ಚರಿಕೆ ನೀಡಿದ್ದಾರೆ,

ಪ್ರೇಮಿಗಳ ದಿನಾಚರಣೆ ವಿದೇಶಿ ಸಂಸ್ಕೃತಿಯಾಗಿದ್ದು, ವಿಶೇಷ ಕಾರ್ಯಕ್ರಮ ಆಯೋಜಿಸದಂತೆ ಬಂಜಾರ ಮತ್ತು ಜುಬ್ಲಿ ಹಿಲ್ಸ್ ಕ್ಲಬ್ ಮತ್ತು ಪಬ್ ಮಾಲೀಕರಿಗೆ ಭಜರಂಗದಳ ಕಾರ್ಯಕರ್ತರು ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com