ಬಿಜೆಪಿಯಿಂದ ತ್ರಿಪುರಾ ಇತಿಹಾಸ ಒಡೆಯುವ ಯತ್ನ : ಮಾಣಿಕ್ ಸರ್ಕಾರ್

ಈಶಾನ್ಯ ರಾಜ್ಯ ತ್ರಿಪುರಾದಲ್ಲಿನ ಇತಿಹಾಸವನ್ನು ಒಡೆದು ಹಾಕಲು ಬಿಜೆಪಿ ಪಿತೂರಿ ನಡೆಸಿದೆ ಎಂದು ದೇಶದಲ್ಲಿಯೇ ಅತಿ ಬಡ ಮುಖ್ಯಮಂತ್ರಿ ಎಂದೇ ಹೆಸರಾಗಿರುವ ಮಾಣಿಕ್ ಸರ್ಕಾರ್ ಹೇಳಿದ್ದಾರೆ.
ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್  ಅವರ (ಸಾಂದರ್ಭಿಕ ಚಿತ್ರ)
ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ (ಸಾಂದರ್ಭಿಕ ಚಿತ್ರ)

ತ್ರಿಪುರಾ: ಈಶಾನ್ಯ ರಾಜ್ಯ ತ್ರಿಪುರಾದಲ್ಲಿನ ಇತಿಹಾಸವನ್ನು ಒಡೆದು ಹಾಕಲು ಬಿಜೆಪಿ ಪಿತೂರಿ ನಡೆಸಿದೆ ಎಂದು ದೇಶದಲ್ಲಿಯೇ ಅತಿ ಬಡ ಮುಖ್ಯಮಂತ್ರಿ ಎಂದೇ ಹೆಸರಾಗಿರುವ ಮಾಣಿಕ್ ಸರ್ಕಾರ್ ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಣಿಕ್ ಸರ್ಕಾರ್, ದೇಶಾದ್ಯಂತ ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

 ಬಿಜಿಪಿ ಹಾಗೂ ಐಪಿಎಫ್ ಟಿ ನಡುವಿನ ಮೈತ್ರಿ ಅಪವಿತ್ರವಾಗಿದ್ದು, ಪ್ರತ್ಯೇಕ ತ್ರಿಪುರಾದ ಬೇಡಿಕೆಗೆ ಬಿಜೆಪಿ ಬೆಂಬಲ ನೀಡುತ್ತಿದೆ . ಆ ಮೂಲಕ ತ್ರಿಪುರಾ  ಇತಿಹಾಸವನ್ನು  ಒಡೆಯುವ ಯತ್ನ ಮಾಡಲಾಗುತ್ತಿದೆ ಎಂದು ಅಪಾದಿಸಿದರು.

ಒಳ್ಳೇ ದಿನ ನೀಡುವುದಾಗಿ ನಾಲ್ಕು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಏನೂ ಮಾಡಿಲ್ಲ. ದೇಶದಲ್ಲಿ ಹಣದುಬ್ಬರ ಜಾಸ್ತಿಯಾಗಿದೆ. ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಎಂದು ಮಾಣಿಕ್ ಸರ್ಕಾರ್ ಆರೋಪಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com