ಜನವರಿ ಮೊದಲ ವಾರದಲ್ಲೇ ಕುಟುಂಬ ಸಮೇತ ದೇಶ ತೊರೆದ ನೀರವ್ ಮೋದಿ

11,300 ಕೋಟಿ ರುಪಾಯಿ ವಂಚನೆ ಪ್ರಕರಣದ ರೂವಾರಿ, ಬಿಲಿಯನೇರ್ ಆಭರಣ ವಿನ್ಯಾಸಕ ನೀರವ್ ಮೋದಿ ಜನವರಿ ಮೊದಲ ವಾರದಲ್ಲೇ....
ನೀರವ್ ಮೋದಿ
ನೀರವ್ ಮೋದಿ
ನವದೆಹಲಿ: 11,300 ಕೋಟಿ ರುಪಾಯಿ ವಂಚನೆ ಪ್ರಕರಣದ ರೂವಾರಿ, ಬಿಲಿಯನೇರ್ ಆಭರಣ ವಿನ್ಯಾಸಕ ನೀರವ್ ಮೋದಿ ಜನವರಿ ಮೊದಲ ವಾರದಲ್ಲೇ ಕುಟುಂಬ ಸಮೇತ ವಿದೇಶಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 29ರಂದು ಪ್ರಕರಣ ದಾಖಲಾಗುವ ಮೊದಲೇ ನೀರವ್ ಮೋದಿ ದೇಶ ತೊರೆದಿದ್ದು, ವಂಚಕನ ವಿರುದ್ಧ ಜಾರಿ ನಿರ್ದೇಶನಾಲಯ ಈಗ ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ.
ನೀರವ್ ಮೋದಿ ಸಹೋದರ ನಿಶಾಲ್ ಬೆಲ್ಜಿಯಂ ನಾಗರಿಕತ್ವ ಹೊಂದಿದ್ದು, ಆತನು ಸಹ ಜನವರಿ 1ರಂದೇ ವಿದೇಶಕ್ಕೆ ಹಾರಿದ್ದು, ಅಮೆರಿಕ ನಾಗರಿಕತ್ವ ಹೊಂದಿರುವ ಮೋದಿ ಪತ್ನಿ ಆಮಿ, ಉದ್ಯಮ ಪಾಲುದಾರ ಮೆಹುಲ್ ಚೌಕ್ಸಿ ಜನವರಿ 6ರಂದು ದೇಶ ತೊರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನಡೆದ 11,300 ಕೋಟಿ ರುಪಾಯಿ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ ಈ ನಾಲ್ವರು ಆರೋಪಿಗಳ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ.
ನೀರವ್ ಮೋದಿ ಸದ್ಯ ಸ್ವಿಜರ್ಲ್ಯಾಂಡ್ ನಲ್ಲಿರುವ ಸಾಧ್ಯತೆ ಇದ್ದು, ಇತ್ತೀಚಿಗಷ್ಟೇ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತೀಯ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆಸಿಕೊಂಡ ಗ್ರೂಪ್ ಪೋಟೋದಲ್ಲಿ ಕಾಣಿಸಿಕೊಂಡಿದ್ದರು.
280.70 ಕೋಟಿಗಳಷ್ಟು ವಂಚನೆ ಪ್ರಕರಣದಲ್ಲಿ ನೀರವ್‌ ಮೋದಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು ಹತ್ತು ಕಡೆ ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com