ಮಹಾರಾಷ್ಟ್ರ: ಲಂಚದ ಹಣ ನುಂಗಿ ಪಾರಾಗಲು ಯತ್ನಿಸಿದ ಮಹಿಳಾ ಪೊಲೀಸ್ ಪೇದೆ

ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 300 ರುಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಮಹಿಳಾ ಮಹಿಳಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 300 ರುಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಮಹಿಳಾ ಮಹಿಳಾ ಪೊಲೀಸ್ ಪೇದೆಯೊಬ್ಬರು, ಆ ಲಂಚದ ಹಣವನ್ನು ಬಾಯಿಗೆ ಹಾಕಿ ನುಂಗಿ ಪಾರಾಗಲು ಯತ್ನಿಸಿದರು ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಕೊಲ್ಹಾಪುರದ ಚಂದಗಡ ಪೊಲೀಸ್‌ ಠಾಣೆಯಲ್ಲೇ ಈ ಘಟನೆ ನಡೆದಿದ್ದು, ಪೊಲೀಸ್ ಪೇದೆ ದೀಪಾಲಿ ಖಡ್ಕೆ ಅವರು ದೂರುದಾರರಿಂದ 300 ರುಪಾಯಿ ಲಂಚ ಪಡೆದು ಸಿಕ್ಕಿಬಿದ್ದದ್ದಾರೆ.
28 ವರ್ಷದ ಯುವಕನೊಬ್ಬ ಪಾಸ್‌ ಪೋರ್ಟಿಗಾಗಿ ನಡತೆ ಪ್ರಮಾಣ ಪತ್ರ ಪಡೆಯಲು ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿದ್ದ. ಇದಕ್ಕಾಗಿ ದೀಪಾಲಿ 300 ರುಪಾಯಿ ಲಂಚ ಕೇಳಿದ್ದರು. ಲಂಚ ಕೊಡಲು ನಿರಾಕರಿಸಿದ್ದ ಯುವಕ ಮಹಿಳಾ ಪೊಲೀಸ್ ಪೇದೆ ವಿರುದ್ಧ ಕೊಲ್ಹಾಪುರದ ಎಸಿಬಿ ಘಟಕಕ್ಕೆ ದೂರು ನೀಡಿದ್ದನು.
ಅಂತೆಯೇ ಪೊಲೀಸ್‌ ಠಾಣೆಯ ರೆಕಾರ್ಡ್‌ ರೂಮಲ್ಲಿ ಮಹಿಳಾ ಪೊಲೀಸ್ ಪೇದೆ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಳು. ತಾನು ಸಿಕ್ಕಿಬಿದ್ದೆ ಎಂದು ಗೊತ್ತಾಗುತ್ತಲೇ ಆಕೆ ಲಂಚವಾಗಿ ಪಡೆದ ನೋಟುಗಳನ್ನು ಬಾಯಿಯಲ್ಲಿ ಹಾಕಿ ಜಗಿಯಲು ಆರಂಭಿಸಿದಳು.  ಆದರೆ ಅದನ್ನು ನುಂಗುವ ಮೊದಲೇ ಎಸಿಬಿ ಅಧಿಕಾರಿಗಳು ಆಕೆಯ ಬಾಯಿಯಿಂದ ನೋಟ್ ಹೊರ ತೆಗೆದಿದ್ದು, ಅದನ್ನು ಸಾಕ್ಷಿಯಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com