ಆಂಧ್ರ: ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಏಳು ಕಾರ್ಮಿಕರು ಸಾವು

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್ ತಾಲೂಕಿನ ಮುರುಂ ಗ್ರಾಮದಲ್ಲಿ ಕೋಳಿ ಫಾರಂವೊಂದರ ಟ್ಯಾಂಕ್ ಸ್ವಚ್ಛ ಮಾಡಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚಿತ್ತೂರು: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್ ತಾಲೂಕಿನ ಮುರುಂ ಗ್ರಾಮದಲ್ಲಿ  ಕೋಳಿ ಫಾರಂವೊಂದರ ಟ್ಯಾಂಕ್ ಸ್ವಚ್ಛ ಮಾಡಲು ತೆರಳಿದ್ದ ಏಳು ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ನಡೆದಿದೆ. 
ಇಂದು ಬೆಳಗ್ಗೆ ಶ್ರೀ ವೆಂಕಟೇಶ್ವರ ಕೋಳಿ ಫಾರಂನಲ್ಲಿ ಈ ಅವಘಡ ಸಂಭವಿಸಿದ್ದು, ಕೋಳಿ ಫಾರಂನಲ್ಲಿ ಕೋಳಿಗಳ ತ್ಯಾಜ್ಯ ಸುರಿಯುವ ಟ್ಯಾಂಕ್ ಸ್ವಚ್ಛಗೊಳಿಸುವ ಸಲುವಾಗಿ ಎಂಟು ಕಾರ್ಮಿಕರು ಟ್ಯಾಂಕ್ ಗೆ ಇಳಿದಿದ್ದರು. ಅದರಲ್ಲಿನ ರಾಸಾಯನಿಕ ಹೊಗೆಯುಕ್ತ ವಾಸನೆಯಿಂದ ಅಸ್ವಸ್ಥರಾದ ಕಾರ್ಮಿಕರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತು. ಆದರೆ ಮಾರ್ಗ ಮಧ್ಯೆಯೇ ನಾಲ್ವರು ಮೃತಪಟ್ಟಿದ್ದು, ಇತರೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೃತರು ಕಾರ್ಮಿಕರು ಎಂ ರಮೇಶ್(32), ಬಿ ರಾಮಚಂದ್ರ(35), ವೆಂಕಟ ರಾಜುಲು(23), ಕೇಶವ(20), ಜಿ ಗೋವಿಂದ ಸ್ವಾಮಿ(35), ಆರ್ ಬಾಬು(30), ಎ ರೆಡ್ಡೆಪ್ಪ(30) ಎಂದು ಗುರುತಿಸಲಾಗಿದ್ದು, ತೀವ್ರ ಅಸ್ವಸ್ಥಗೊಂಡಿರುವ ಮತ್ತೊರ್ವ ಕಾರ್ಮಿಕ  ಶಿವ ಕುಮಾರ್(46) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಪಲಮೇನರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com