ಮಾ.1 ರಿಂದ ರೈಲು ಬೋಗಿಗಳ ಮೇಲೆ ರಿಸರ್ವೇಷನ್ ಪಟ್ಟಿ ಇರುವುದಿಲ್ಲ!

ಮಾ.1 ರಿಂದ ಆರು ತಿಂಗಳ ವರೆಗೆ ರೈಲು ಬೋಗಿಗಳ ಮೇಲೆ ಕಾಯ್ದಿರಿಸಲಾಗಿರುವ ಟಿಕೆಟ್ ನ ಪಟ್ಟಿಯನ್ನು ಹಾಕದಂತೆ ರೈಲ್ವೆ ಇಲಾಖೆ ಎಲ್ಲಾ ವಲಯ ರೈಲ್ವೆ ನಿಲ್ದಾಣಗಳಿಗೆ ಸೂಚನೆ ರವಾನಿಸಿದೆ.
ರೈಲು ಬೋಗಿ
ರೈಲು ಬೋಗಿ
ನವದೆಹಲಿ: ಮಾ.1 ರಿಂದ ಆರು ತಿಂಗಳ ವರೆಗೆ ರೈಲು ಬೋಗಿಗಳ ಮೇಲೆ ಕಾಯ್ದಿರಿಸಲಾಗಿರುವ ಟಿಕೆಟ್ ನ ಪಟ್ಟಿಯನ್ನು ಹಾಕದಂತೆ ರೈಲ್ವೆ ಇಲಾಖೆ ಎಲ್ಲಾ ವಲಯ ರೈಲ್ವೆ ನಿಲ್ದಾಣಗಳಿಗೆ ಸೂಚನೆ ರವಾನಿಸಿದೆ.  
ಪ್ರಾಯೋಗಿಕವಾಗಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, A1, A ಹಾಗೂ B ಕೆಟಗರಿ ರೈಲ್ವೆ ನಿಲ್ದಾಣಗಳಲ್ಲಿ ಈ ಬೋಗಿಗಳ ಮೇಲೆ ರೈಲ್ವು ಟಿಕೆಟ್ ಕಾಯ್ದಿರಿಸಲಾಗಿರುವ ಪಟ್ಟಿಯನ್ನು ಹಾಕಲಾಗುವುದಿಲ್ಲ. ಆದರೆ ರೈಲ್ವೆ ನಿಲ್ದಾಣಗಳ ಚಾರ್ಟ್ ನಲ್ಲಿ ಹಾಕಲಾಗುತ್ತದೆ. 
ನವದೆಹಲಿ, ಹಜರತ್ ನಿಜಾಮುದ್ದೀನ್, ಮುಂಬೈ ಸೆಂಟ್ರಲ್, ಚೆನ್ನೈ ಸೆಂಟ್ರಲ್, ಹೌರಾ ನಿಲ್ದಾಣಗಳಲ್ಲಿ ಈ ಕ್ರಮ ಕೈಗೊಂಡ ಬೆನ್ನಲ್ಲೇ A1, A ಹಾಗೂ B ಕೆಟಗರಿ ರೈಲ್ವೆ ನಿಲ್ದಾಣಗಳಲ್ಲಿಯೂ ಈ ಪದ್ಧತಿಯನ್ನು ಅಳವಡಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com