ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಹಿಂದೂ ಸಂಹಾತಿ ಮುಖ್ಯಸ್ಥರೂ ಸೇರಿದಂತೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹಲವರಿಗೆ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೋಲ್ಕತ್ತಾ: ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಹಿಂದೂ ಸಂಹಾತಿ ಮುಖ್ಯಸ್ಥರೂ ಸೇರಿದಂತೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹಲವರಿಗೆ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನದ ಆರೋಪ, ಸೆಕ್ಷನ್ 326 ರ ಅಡಿಯಲ್ಲಿ ಹಲ್ಲೆ ನಡೆಸಿದ ಆರೋಪ ಸೆಕ್ಷನ್ 427 ರ ಅಡಿಯಲ್ಲಿ ಆಸ್ತಿ ಹಾನಿ ಉಂಟು ಮಾಡಿದ ಆರೋಪವನ್ನು ಹೊರಿಸಲಾಗಿದ್ದು, ಹಿಂದೂ ಸಂಹಾತಿ ಮುಖ್ಯಸ್ಥರೂ ಸೇರಿದಂತೆ ಆರೋಪಿಗಳು ಫೆ.,15-17 ರ ವರೆಗೆ ಪೊಲೀಸ್ ವಶದಲ್ಲಿದ್ದರು.
ಬಂಧಿತ ಆರೋಪಿಗಳನ್ನು ಸೆಷನ್ಸ್ ನ್ಯಾಯಾಲಯದೆದುರು ಹಾಜರುಪಡಿಸಲಾಗಿತ್ತು. ಫೆ.22 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುವ ಕೋರ್ಟ್ ಅದೇ ದಿನಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಮುಸ್ಲಿಮ್ ಸಮುದಾಯದ ಕೆಲವರನ್ನು ಘರ್ ವಾಪಸಿ ಮಾಡುತ್ತಿದ್ದಾಗ ಪ್ರಶ್ನೆ ಕೇಳಿದ್ದ ಮಾಧ್ಯಮದವರ ಮೇಲೆ ಹಿಂದೂ ಸಂಹಾತಿ ಮುಖಂಡರು ಹಲ್ಲೆ ನಡೆಸಿದ್ದರು.